ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾತೀರದಿ ಕುಳಿತಿಷ್ಟವ ಸಲಿಸುವನ್ಯಾರೇ ಪೇಳಮ್ಮಯ್ಯ ಪ ಕಷ್ಟರಹಿತ ಸಂತುಷ್ಟರೆನಿಪ ಸತ್ಯೇಷ್ಟತೀರ್ಥ ಕರಜಪರಾಕ್ರಮರೇ ಅ.ಪ. ಬೋಧ ಮುನಿಯು ಮತ ಶುಭವಾರಿಧಿ ತಾರಕೆ ತಾರೆನೆನಿಪ ಜೀವತಾರ ಶಶಿಕಾಣಮ್ಮ 1 ಶುಭ ತಿಲುಕಾಂಕಿತದಿಂದೊಪ್ಪುವನ್ಯಾರೆ ಪೇಳಮ್ಮಯ್ಯಚಂದ್ರಕಂಠಮಾಲೆ ಕರದಿ ದಂಡವ ಧರಿಸಿಹನ್ಯಾರೆ ಪೇಳಮ್ಮಯ್ಯ ಚಂದ್ರಚರಣ ನಖಶಿಖ ಪರಿಪೂರ್ಣದಿಂದೊಪ್ಪುವ ಗುರುವರ್ಯ ಕಾಣಮ್ಮ 2 ವೃಂದಾವನವರ ಮಂದಿರ ಮಧ್ಯದಿ ರಾಜೀವನ್ಯಾರೇ ಪೇಳಮ್ಮಯ್ಯ ವೃಂದಾರಕ ವರವೃಂದ ವಿನುತನ್ಯಾರೆ ಪೇಳಮ್ಮಯ್ಯ ವೃಂದಾವನ ಸುಂದರ ಗುಣಗಳಿಂಧೊಳೆ ಯುವನ್ಯಾರೆ ಪೇಳಮ್ಮಯ್ಯ ವೃಂದಾವನದೊಳಗಾಶ್ರಿತ ತಂದೆವರದಗೋಪಾಲವಿಠಲನಸೇವಿಪರೇ 3
--------------
ತಂದೆವರದಗೋಪಾಲವಿಠಲರು
ಗುರು ಎಂಥಾ ಗಾರುಡಿಗಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆಕರದಲ್ಲಿ ಏನಿತ್ತೋ ಜವೆಯ ಬೂದಿಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1 ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದುಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದನಾರಿ ಬದುಕು ಮನಮಕ್ಕಳನೆಲ್ಲವಸೇರಿ ಸೇರದಂತೆ ಮಾಡಿದನೆ ಗುರು2 ಭವಗೇಡಿ ಕುಲಗೇಡಿ ಸಂಗಗೇಡಿಯಾದೆಇವನ ವಿಶ್ವಾಸದ ಫಲದಲಿಂದಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆವ್ಯವಹಾರವೆಂಬುದು ಎಡವಟ್ಟಾಯಿತು3 ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನಮಂತ್ರ ತಂತ್ರಕ್ಕದು ಬಗ್ಗಲಿಲ್ಲಮಂತ್ರದ ಮಹಿಮೆಯು ಮಹಾಮಹಿಮೆಯುಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4 ಇವನ ನಂಬಿದ ಮೇಲೆ ಇವನಂತಲ್ಲದೆಭುವನಕ್ಕೆ ತಿರುಗಿ ತಾ ತಾರೆನೆವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನುಭುವನ ರಕ್ಷಕ ಚಿದಾನಂದನೆ ಗುರು 5
--------------
ಚಿದಾನಂದ ಅವಧೂತರು
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ