ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತ ಅಡಿಗಡಿ ಗೆಚ್ಚರಿಕ್ಹೇಳುತಾನೋ ಪ ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ ಕಿಚ್ಚುಕಾಣೆನುತಾನೋಅ.ಪ ನಿಂದೆ ಬಿಡೆನ್ನುತಾನೋ ಜಗವಿದು ಕುಂದುವುದೆನುತಾನೋ ನಿನಗಿದು ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ ಮುಂದೆ ನಿನಗೆ ಭವಬಂಧ ಬಿಡದೆನುತಾನೋ 1 ನಿಶ್ಚಲಾಗೆನ್ನುತಾನೋ ಮನ ಬಹು ಸ್ವಚ್ಛಮಾಡೆನ್ನುತಾನೋ ತನು ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ 2 ಮರೆವು ತಾರೆನುತಾನೊ ನಿಚ್ಚವಾ ದರಿವು ತಿಳಿಯೆನುತಾನೋ ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ ತರಣಿ ಕಂಡು ಹರಷದ್ಹಾಡೆನುತಾನೋ 3
--------------
ರಾಮದಾಸರು
ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ ನ್ನೆಂಥಾ ಠೌಳಿಗಾರನಮ್ಮ ಪ. ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ. ನೀರೊಳು ಮೀಯಲು ಪೋದೆನೆ ಗೋಪಮ್ಮ ಸಾರಿ ಪಿಡಿಯಲು ಹೋದೆ ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ 1 ಗೋಪಿ ಧೂಳು ಕೆದರಿ ಕೋರೆ ತೋರುವನ ಖೂಳ ದೈತ್ಯನ ಸೀಳೆ ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ ಕೇಳಿದೊಡಲು ಭಯ ತಾಳಿ ಬಂದೆ ಇಂಥ2 ದೊರಕಿದನೆಂದೆ ತಿರುಕ ಬ್ರಹ್ಮಚಾರಿ ತಿರುಗಿ ನೋಡೆ ಥೋರ ಕೊಡಲಿ ಪಿಡಿದು ನಿಂತು ಮಾರುತಿ ಸೇವಿತನಾದ ಗಮನ ದೇವನು ಎಂಥಾ 3 ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು ಗೋಪಿ ಇಂಥಾ 4 ಶ್ರೀಪತಿ ಶ್ರೀನಿವಾಸನ ಪಿಡಿದು ಗೋಪಾಲನ ಎಳತಂದೆ ನಿನ್ನೆಡೆಗೆ ತಾ ಪರಾರಿಯಾಗಿ ಗೋಪತಿ ಹಯನೇರಿ ಏಪರಿ ಪೋದನೊ ತಾಪತಾಳಲಾರೆ ಎಂಥಾ 5
--------------
ಸರಸ್ವತಿ ಬಾಯಿ
ಏನ ಹೇಳಲಿ ಕೃಷ್ಣನಗುಣವ ನೋಡೆ ಸಖಿಯೆ ಪ. ಜಾರತನದಿ ಶೀರೆಯ ಶಳಕೊಂಡು ಮಾರನಾಟಕೆ ಎನ್ನ ಮರುಳು ಮಾಡಿದನಮ್ಮ 1 ಚಂಡು ತಾರೆನುತಲಿ ದುಂಡು ಕುಚವಪಿಡಿದು ಕಂಡು ಕಂಡಲ್ಲಿ ಎನ್ನ ಬಹು ಭಂಡು ಮಾಡುತಲಿಹನಮ್ಮ 2 ತಂದೆ ಹೆಳವನಕಟ್ಟೆ ರಂಗನ ಕೃಪೆಯಿರಲು ಬಂದ ದುರಿತಗಳು ನಂದಿ ಪೋಗುವವು 3
--------------
ಹೆಳವನಕಟ್ಟೆ ಗಿರಿಯಮ್ಮ
ಬಲ್ಲವನಿವನು ಚಿಕ್ಕವನಲ್ಲವೆ ಬಾಲಕನು ಇಲ್ಲದ ನುಡಿಗಳ ಎನ್ನೊಡನುಸುರಲು ಇಲ್ಲಿಗೆ ಬಂದಿರೆ ಗೋಪಿಯರÉಲ್ಲರು ಪ ಮಣಿಮಯದೊಡಿಗೆಯನು ತೆಗೆತೆಗೆದ್ಹಣಿವನೆ ಬಲ್ಲವನು ಉಣಲೊಲ್ಲ ಉಡಲೊಲ್ಲ ಚಲಗೊಂಡಳುವ ಜಾರ ಚೋರನಂಬರೇ 1 ಹೆಣ್ಣಿಗೆ ಮರುಳಾಗುವ ಪ್ರಾಯವೆ ಕಣ್ಣು ನಿಮಗೆ ಕಾಣವೆ ಸಣ್ಣವನಿವಗೆ ನಿಲುಕದ ನೆಲುವಿನ ಪಾ ಲ್ಬೆಣ್ಣೆಯ ಮೆದ್ದೋಡಿ ಬಂದನೆಂದೆಂಬರೆ 2 ಅಂಬರದೊಳು ಮೂಡಿದ ಚಂದ್ರಬಿಂಬವ ತಾರೆನುತ ಕುಂಬಿನಿಯೊಳು ಬಿದ್ದು ಹೊರಳುವ ತರಳ ಹಿಡಿಂಬೆಯ ರಮಣ ಕೋಣೆಯ ಲಕ್ಷ್ಮೀರಮಣನು 3
--------------
ಕವಿ ಪರಮದೇವದಾಸರು
ವಾಸವನಾಮಕ ದಾಸರ ನೆರೆನಂಬೂ | ಜ್ಞಾನ ಭಕುತಿ ತುಂಬೂಕಾಸುಗಳಿಸಿ ಕೋಟಿಶ್ವರ ನೆನಿಸಿದನಾ | ಸರ್ವವು ಚಲ್ಲಿದನಾ ಅ.ಪ. ಆಶೆಯೆಂದೆನಿಸುವ | ಪೈಶಾಚವ ಕಳೆಯೇ | ದ್ವಿಜಸೋಗಿನಲ್ಹರಿಯೇಕೂಸಿಗೆ ಬ್ರಹ್ಮಚಾರಿ | ಆಶ್ರಮಕೇ ಬೇಡೇ | ಮತ್ತೆ ಕೊಂಡಾಡೇಭೂಸುರ ಬಹುಪರಿ | ಕ್ಲೇಶನಟಿಸಿ ಪೇಳೇ | ಮತ್ತು ಅವನಕೇಳೇಲೇಸುಕಾಸು ಕೊಡ | ದಾಶ್ಮ ಹೃದಯ ವಿವರಾ | ತೆರಳಿದ ದ್ವಿಜವರ 1 ಅತ್ತಿತ್ತಲು ತಿರುಗುತ | ಮತ್ತೆ ಮನೆಗೆ ಬಂದಾ ತಾನಲ್ಲೆ ನಿಂದಹಿತ್ತಲ ಬಾಗಿಲೊಳ್ | ನಿಂತ ಸತಿಯನಾಸಾ ನೋಡಿದ ತಾ ಶ್ರೀಶಾಚಿತ್ತವ ಪ್ರೇರಿಸಿ | ಮತ್ತೆ ಬೇಡಿತಂದಾ | ಮೂಗುತಿ ಬಲು ಛಂದಾವಿತ್ತತಾರೆನುತವ | ನ್ಹತ್ತಿರಿತ್ತು ಪೋದಾ | ಮತ್ತೆ ಬರಧೋದಾ 2 ಸತಿ ಗರ | ಬಟ್ಟಲ ಕುದಿಪೋಗೇ | ಮೂಗುತಿ ಬಿತ್ತಾಗೇ 3 ಸುಂಡಿಪೋಗೆ ತನ | ದಿಂಡು ವ್ಯಸನಕಾಗೀ | ತನಪಾಪಕೆ ಮರುಗೀಕಂಡು ಈಸೋಜಿಗ | ಕೊಂಡಾಡಿದ ಸತಿಯ | ಆದನು ಹೊಸಪರಿಯ ಭಂಡತನದ ಭಂಡಿ | ಭಂಡಿ ದ್ರವ್ಯವೆಲ್ಲ | ದಾನ ಮಾಡ್ದನಲ್ಲಿ ಗಂಡುಗಲಿಯು ಆಗಿ | ಪುಂಡರಿಕಾಕ್ಷಪದಾ | ಬಂಡುಣಿ ತಾನಾದಾ 4 ಪಾದ ಸಿರಿ ಪಾದ ಭಜಿಸೇ | ಇಂದ್ರ ದಾಸನೆನಿಸೇ ಸಂಗ ರಹಿತರಿಗೆ | ಮಂಗಳ ಸಂದೇಶ | ಇತ್ತು ತಾನುಪದೇಶಾ ಅಂಗಜ ಪಿತ ಗುರು | ಗೋವಿಂದ ವಿಠ್ಠಲನಾ ಚರಿತೆಗಳ್ ಬಿತ್ತಿದನಾ 5
--------------
ಗುರುಗೋವಿಂದವಿಠಲರು
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ