ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಜಾಗುರೇ ಯೋಗೀಶೇ ಭಲರೇಜಾಗುರೇ ಯೋಗೀಶೇಜಾಗುರೇ ಯೋಗೀ ಚತುರ್ಗುಣ ಪೋಗಿರಾಗವ ನೀಗಿ ತಾನೆ ತಾನಾಗಿ ಪ ಆಶಾವರ್ಜಿತೇ ಬಹಳಾಯಾಸ ನಿರ್ಜಿತೇವಾಸನನಾದಂ ಮಹಮತ್ತಾದಂಭಾಸುರತಾದಂ ಭವನೀಜಾದಂ 1 ಕರ್ಮ ವಿದಾರಿತೇ ಬಹಳ ವರ್ಮನಿಸ್ಸಾರಿತೇನಿರ್ಮಳಾತ್ಮಂ ನಿಷ್ಕಳಾತ್ಮಂ ಸ್ವಪೂರ್ಣತ್ಮಂಸಮತೇಜಾತ್ಮಂ 2 ವಾದಾ ದೂರಿತೇ ಬಹಳ ವಿವಾದೋತ್ತಾರಿತೇ ಸದಾನಂದಂ ಸಹಜಾನಂದಂಚಿದಾನಂದ ಗುರು ತಾನಾದಂ 3
--------------
ಚಿದಾನಂದ ಅವಧೂತರು
ಪದಯುಗಳಂ ಪ ರಾಮಸುಂದರ ಘನ ಶ್ಯಾಮರಘೂದ್ವಹ ಅ.ಪ. ದಶರಥ ಹೃದಯಾನಂದಕರಂ ತ್ರಿದಶಗಣಚಿತ್ತಾಮೋದಕರಂ 1 ಪೂರಿತ ಕೌಶಿಕಯಜನಂ ಸಂತಾರಿತಗೌತಮ ಲಲನಾಂ 2 ಖಂಡಿತ ಶಂಕರ ಚಾಪಂ ಪರಿ-ದಂಡಿತ ಭಾರ್ಗವ ಕೋಪಂ 3 ಪಾತಕ ನಿಚಯಂ 4 ಮುನಿಜನ ಸ್ತುತಿರಚನಂ5 ಭಾರದ್ವಾಜಾರ್ಪಿತ ಭೋಜ್ಯಂ 6 ಉದ್ದಂಡ ವಿರಾಧಪಾತಕ ಹರಣಂ 7 ನಿರ್ಜಿತರಾಕ್ಷಸಷಂಡಂ8 ಧೃತಜಗದುಲ್ಲಾಸಂ 9 ವಿವಿಧಾಯುಧಜಾಲಂ 10 ಶೂರ್ಪನಖಾಂಗಂ 11 ನರವರಮುನಿಗಣ ಪರಿಪಾಲಂ12 ಮಾಯಾಮೃಗಾರ್ಪಿತ ಬಾಣವರಂ- ಜಟಾಯುಸಂಪಾದಿತ ಲೋಕವರಂ 13 ರಾವಣಹೃತ ನಿಜ ಪತ್ನೀಕಂ ಲೋಕಾವನಗತ ಕೋಪೋದ್ರೇಕಂ 14 ಬಂಧನ ಮೋಚನ ಚತುರಂ 15 ವಾತತನೂಭವ ಕೃತಸ್ತೋತ್ರಂ-ಪಂಪಾತಟಿನಿರ್ಮಿತ ಸುಕ್ಷೇತ್ರಂ16 ಶಿಕ್ಷಿತ ಸಂಕ್ರಂದನ ತನುಜಂ-ಸಂರಕ್ಷಿತ ಚಂಡ ಕಿರಣ ತನುಜಂ17 ಸೀತಾಲೋಕನ ಕೃತಕಾಮಂ-ನಿಜಧೂತಾಮೋದನ ಸುಪ್ರೇಮಂ18 ಯವನಾಲಯ ಪರಿವಾರಂ19 ಧೂತಾಹೃತ ಶುಭದೃಷ್ಟಾಂತಂ-ವಿಜ್ಞಾತನಿಜಸ್ತ್ರೀ ವೃತ್ತಾಂತಂ20 ಭೀಷಣ ಜಲನಿಧಿ ಬಂಧಕರಂ-ವಿಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲದಿಂ-ಸಂತೋಷಿತ ದೈವತ ಪರಿಧಿಂ22 ಪಾತಕ ನಿಜ ನಾಮಾಂಕಂ 23 ಸ್ವೀಕೃತ ಸಾಕೇತವಾಸಂ-ಅಂಗೀಕೃತ ಮಾನುಷ್ಯ ವಿಲಾಸಂ24 ವಿಠಲಮತಿಶಯರುಚಿರಂ25
--------------
ಸರಗೂರು ವೆಂಕಟವರದಾರ್ಯರು
ರಾಮಭಜೇ ತೇ ಪದಯುಗಳಂ ಸೀತಾ ಪ ರಾಮಭಜೇ ತೇ ಪದಯುಗಳಂ ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ ದಶರಥ ಹೃದಯಾನಂದಕರಂ ತ್ರಿ ದಶಗಣ ಚಿತ್ತಾಮೋದಕರಂ 1 ಪೂರಿತ ಕೌಶಿಕಜನಂ ಸಂ ತಾರಿತ ಗೌತಮ ಲಲನಾಂ 2 ಖಂಡಿತ ಶಂಕರಚಾಪಂ ಪರಿ- ದಂಡಿತ ಭಾರ್ಗವ ಕೋಪಂ 3 ಸ್ವೀಕೃತ ಜಾನಕೀಹೃದಯಂ ದೂ ರೀಕೃತ ಪಾತಕನಿಚಯಂ 4 ಪಾಲಿತ ಮಾತಾಪಿತೃ ವಚನಂ ಸಂ ಲಾಲಿತ ಮುನಿಜನ ಸ್ತುತಿರಚನಂ 5 ಭರತ ಸಮರ್ಪಿತ ನಿಜರಾಜ್ಯಂ ಮುನಿ ವರಭಾರದ್ವಾಜಾರ್ಪಿತ ಭೋಜ್ಯಂ 6 ದಂಡಕಾರಣ್ಯಂ ಪಾವನಚರಣಂ ಉ- ದ್ದಂಡ ವಿರಾಧಾ ಪಾತಕಹರಣಂ 7 ಕುಂಭಜಾರ್ಪಿತ ಶರಕೋದಂಡ ಸಂ ರಂಭ ನಿರ್ಜಿತ ರಾಕ್ಷಸದಂಡಂ 8 ಪಂಚವಟೀತಟ ಕೃತವಾಸಂ ದೃ ಗಂಚಲ ಧೃತಗಜದುಲ್ಲಾಸಂ 9 ಶೂರ್ಪನಖೀ ವಚನಾಲೋಲಂ ಸಹ ಜಾರ್ಪಿತ ವಿವಿಧಾಯುಧ ಜಾಲಂ 10 ರೂಪನಿರ್ಜಿತ ಸುಮಬಾಣಾಂಗಂ ವಿ ರೂಪಿತ ದುಷ್ಟ ಶೂರ್ಪನಖಾಂಗಂ 11 ಖರತರ ಖರದೂಷಣಕಾಲಂ ಸುರ ನರವರ ಮುನಿಗಣ ಪರಿಪಾಲಂ 12 ಮಾಯಾಮೃಗಾರ್ಪಿತ ಬಾಣವರಂ ಜ- ಟಾಯು ಸಂಪಾದಿತ ಲೋಕವರಂ13 ರಾವಣಹೃತ ನಿಜಪತ್ನೀಕಂ ಲೋ- ಕಾವನಗತ ಕೋಪೋದ್ರೇಕಂ14 ಸಾಧಿತ ಶಬರೀ ಮೋಕ್ಷಕರಂ ಕ- ಬಂಧ ಬಂಧನ ಮೋಚನ ಚತುರಂ 15 ವಾತ ತನೂಭವ ಕೃತಸ್ತೋತ್ರಂ ಪಂ ಪಾತಟ ನಿರ್ಮಿತ ಸುಕ್ಷೇತ್ರಂ 16 ಶಿಕ್ಷಿತ ಸಂಕ್ರಂದನ ತನುಜಂ ಸಂ- ರಕ್ಷಿತ ಚಂಡಕಿರಣ ತನುಜಂ 17 ಸೀತಾಲೋಕನ ಕೃತಕಾಮಂ ನಿಜ ದೂತಾಮೋದನ ಸುಪ್ರೇಮಂ 18 ನಿಜಕರ ಭೂಷಣ ದಾತಾರಂ ಧುರ ವಿಜಯ ವನಾಲಯ ಪರಿವಾರಂ 19 ಧೂತಾಹೃತ ಶುಭದೃಷ್ಟಾಂತಂ ವಿ- ಜ್ಞಾತ ನಿಜಸ್ತ್ರೀ ವೃತ್ತಾಂತಂ 20 ಭೀಷಣ ಜಲನಿಧಿ ಬಂಧಕರಂ ವಿ ಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲಧಿಂ ಸಂ- ತೋಷಿತ ದೈವತಪರಿಧಿಂ 22 ಸೀತಾ ಸಮಾಶ್ರಿತ ವಾಮಾಂಕಂ ಪರಿ- ಪಾತಕ ನಿಜನಾಮಾಂಕಂ 23 ಸ್ವೀಕೃತ ಸಾಕೇತಾವಾಸಂ ಅಂ- ಗೀಕೃತ ಮಾನುಷವಿಲಾಸಂ 24 ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ ವರದವಿಠಲಮತಿಶಯ ರುಚಿರಂ 25
--------------
ವೆಂಕಟವರದಾರ್ಯರು
ವಿಠಲಾ ಕಳೆಮದವಿದ್ಯಾ ಪಟಲಾ |ನಿಟಲಾಕ್ಷನ ಸಖಸಂ | ಕಟ ಕಳೆ ನಿಮ್ನಟಲನ ಮಾಡುತ ಪ ತುರಗ ಗ್ರೀವಾಭಿಧನೆಂಬಸುರಾ | ವೇದಾಪಹಾರನೆರೆವೇರಿಸೆ ಸ್ವೀಕರಿಸವತಾರಾ | ಹಯಮುಖನಾಕರ |ಅರಿಶಿರ ಸರಸದಿ ತತ್ತರಿಸುತ ನೀಸುರರುಗಳನು ಬಹು ಪರಿಪೋಷಿಸಿದ್ದೆ 1 ಧರೆಯನಪಹರಿಸಲು ಸುರವೈರೀ | ವರಾಹಾವತಾರಿತ್ವರದಿ ಹಿರಣ್ಯಾಕ್ಷನ ಸಂಹಾರೀ | ನೀನಾದೆ ಮುರಾರಿ |ಧರಣಿಯ ಕೋರೆಯ ದಾಡಿಯಲೆತ್ತುತ್ತಸುರ ಜೇಷ್ಠಗೆ ತಂದೊಪ್ಪಿಸಿದ್ಯೆಯ್ಯ | 2 ತುರಗವ ನೀನೇರುತ ಬಂದೂ | ನಿನಪುರದೊಳಂದುಇರೆ ಧೇನೂಪಲಾರ್ಯರು ಅಂದು | ನೋಡಿ ಚಕಿತರಂದೂಗುರು ಗೋವಿಂದ ವಿಠಲಾಲೇನಾಹಿ ಎಂದುಬರಿದೋಡಿದೆ ನೀ ದರುಶನ ಕೊಡದೇ 3
--------------
ಗುರುಗೋವಿಂದವಿಠಲರು