ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಭೂವರಾಹ ವಿಠಲನೆ | ಸೇವಕನ ಪೊರೆಯೊ ಪ ಕಾವಕರುಣಿಗಳರಸ | ಭಾವಜಾನಯ್ಯ ಅ.ಪ. ಏಸೆಸೊ ಜನ್ಮಗಳ | ಸೂಸಿದನುಭವದಿಂದಲೇಸಾದ ಮಧ್ವಮತ | ಪೋಷಿಸುತ್ತಿಹನೊವಾಸವಾದ್ಯಮರನುತ | ಶೇಷಾದ್ರಿವಾಸಹರಿಪೋಷಿಸೊ ಬಿಡದಿವನ | ಆಶೆಪೂರಯಿಸಿ 1 ತಾರತಮ್ಯಜ್ಞಾನ | ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಕಾರಣಾತ್ಮಕನೆಸಾರತಮ ನೀನೆಂಬ | ಚಾರುಮತಿಯನೆ ಕೊಟ್ಟುನೀರಜಾಸನ ವಂದ್ಯ | ಪಾರುಗೈಭವವ 2 ಅಧ್ಯಾತ್ಮ ಅಧಿಭೂತ | ಆದಿಭೌತಿಕತಾಪಭೋದಿಸುತ ಸಾಧನದ | ಹಾದಿಯಲ್ಲಿರಿಸೋಮಧ್ವಾಂತರಾತ್ಮಕನ | ಪಾದರತಿಯಲಿ ಶ್ರದ್ಧೆಉದ್ಧರಿಸು ಇವನಲ್ಲಿ | ಹದ್ದುವಾಹನನೇ 3 ಕಂಸಾರಿ ಪೊರೆಯೊಹಂಸ ವಾಹನನಾದಿ | ತೃಣಾಂತ ಚವರನಹಂಸರೂಪಿಹರಿಯ | ಆಧೀನ ತಿಳಿಸೋ 4 ಸರ್ವತ್ರ ವಾಪ್ತನಿಹ | ಸರ್ವ ದೋಷ ವಿದೂರಸರ್ವಂತಾರಾತ್ಮಕನೆ | ಸರ್ವೋತ್ತಮಸರ್ವಧಾತನ ಸ್ಮøತಿಯ | ದರ್ವಿ ಜೀವಿಗೆಯಿತ್ತುಪೊರೆಯೊ ಸುಂದರ ಗುರು | ಗೋವಿಂದ ವಿಠಲ5
--------------
ಗುರುಗೋವಿಂದವಿಠಲರು
ವಾಸುದೇವ ಹರಿ ವಿಠಲಾ | ಪೋಷಿಸುವುದಿವನಾ ಪ ನೀಸಲಹದಿರೆ ಅನ್ಯ | ಆಶ್ರಯಗಳುಂಟೇ ಅ.ಪ. ದಾಸವೃತ್ತಿಯಲಿದ್ದು | ಮೀಸಲಳಿಯದೆ ಇರುವದಾಸದೀಕ್ಷಾಂಕಿತವು | ಲೇಸು ದೊರೆಯದಲೇ |ಘಾಸಿ ಪಡುತಲಿ ಮನದಿ | ಆಶ್ರಯಿಸಿ ಎನ್ನ ಸುಪ್ತೀಶ ಸೂಚ್ಯಪರಿ ಉಪ | ದೇಶವಿತ್ತಿಹೆನೋ 1 ಒಂದೊಮ್ಮೆ ಇವನಮ್ಮ | ಬಂಧುವೆಂದೆಣಿಸಿಹನೊಇಂದಿರಾಪತಿ ಹರಿಯೆ | ಕಂದರ್ಪಜನಕಾತಂದೆತಾಯಿಯು ನೀನೆ | ಕುಂದುನೆಣಿಸದೆ ಇವನಾಛಂದದಲಿ ಸಲಹೊ ಹರಿ | ನಂದ ಮುನಿವಂದ್ಯಾ 2 ತಾರತಮ್ಯಜ್ಞಾನ ಮೂರೆರಡು ಭೇದಗಳವಾರವಾರಕೆ ತಿಳಿಸಿ | ಕಾಪಾಡೊ ಹರಿಯೇ |ಮಾರಪಿತಮುರಮೈರಿ | ವೈರಾಗ್ಯ ಭಾಗ್ಯಕ್ಕೆದಾರಿತೋರುತ ಪೊರೆಯೊ | ವಾರಿಜಾಂಬಕನೇ 3 ಉತ್ತಮಾನುಷ್ಠಾನ | ಇತ್ತು ಈತಗೆ ನೀನುಚಿತ್ತದೊಳು ವ್ಯಾಪ್ತ ಸ | ರ್ವತ್ರ ಸ್ಮøತಿಯಿತ್ತು |ಎತ್ತು ಭವವನಧಿಯಿಂ | ಕೃತ್ತಿವಾಸನ ತಾತಮತ್ತನ್ಯ ಬೇಡೆ ನಿನ | ಚಿತ್ತದೊಲ್ಲಭನೇ 4 ದೇವ ದೈತ್ಯರು ದೇಹ | ಆವಾಶಿವಿಹರೆಂಬಭಾವಗಳ ತಿಳಿಸುತ್ತ | ತೀವ್ರುಪಾಸನವಾ |ದೇವ ಇವಗಿತ್ತು ಸಂ | ಭಾವಿಪುದು ಶ್ರೀಹರಿಯೆಗೋವಿಂದಾಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು