ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಪದ್ಮನಾಭ | ವಿಠ್ಠಲನೆ ನೀನಿವನಅನಂತ ಜನ್ಮದ ಪಾಪ | ಕಳೆದು ಸಲಹೋ ಪ ಗುಣಗಣಾರ್ಣವ ಸ್ವಾಮಿ | ಪೂರ್ಣಕರುಣೆಯೆಂದುನಿನಗೆ ನಾ ಬಿನ್ನೈಪೆ | ಸತತ ಹರಿಯೇ ಅ.ಪ. ಹಂಚಿ ದೈತ್ಯರಿಗೇ |ಸಂಚಿತಾಗಮ ಕಳೆವ | ಸಂಚುಗಳ ನೀ ತೋರಿವಾಂಛಿತಪ್ರದನಾಗೊ | ಅಂಚೆವಹ ಪಿತನೇ 1 ಭವ ತಾರಕವು | ನಾಮಸ್ಮøತಿಯೆಂಬಮೃತಯಾಮಯಾಮಕೆ ಉಣಿಸಿ | ರಾಮನೇ ಸಲಹೋ 2 ಮೂರೆರಡು ಭೇದಗಳು ತಾರತಮ್ಯ ವನರುಹಿಸಾರತಮ ನೀನೆಂಬ | ಸುಜ್ಞಾನವೀಯೋ |ಕಾರಣಿಕ ಶ್ರೀಹರಿಯೆ | ವೈರಾಗ್ಯ ಧನದಿ ಸಂಸಾರ ನಿಸ್ಸಾರೆಂಬ | ಸನ್ಮತಿಯ ನೀಯೋ 3 ದಾಸನಿವನೆಂದೆನುತ | ನೀ ಸಲಹ ಬೇಕಿವನಈಶಾದಿ ದಿವಿಜೇಡ್ಯ | ಶೇಷಶಾಯೀಕ್ಲೇಶ ಆನಂದಗಳು | ಶ್ರೀಶ ನಿನ್ನಿಂದೆಂಬಈಸು ಸನ್ಮತಿ ಕೊಟ್ಟು | ನೀ ಸಲಹಬೇಕೊ4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ನೀನಿರಲು | ನಾ ಪೇಳ್ವುದೇನೋದರ್ವಿ ಜೀವನ ಕಾವ | ಸರ್ವಭಾರವು ನಿಂದುಸರ್ವ ಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಾಯ ಬೇಕಿವಳಾ ಪ ಪದುಮನಾಭನೆ ನಿನ್ನ ಸೇವೆ ಕಾತುರಳಾ ಅ.ಪ. ಸುಕೃತ ರಾಶಿಗೇ ಫಲರೂಪದಾಸದೀಕ್ಷೆಯ ವಹಿಸೆ ಆಶಿಸುತ್ತಿಹಳೊ |ಕೇಶವನೆ ಹೃದಯಾಬ್ಜವಾಸ ತವ ಸೇವೆಯನುಲೇಸಾಗಿ ಕೊಟ್ಟು ಮನದಾಶೆ ಪೂರೈಸೋ 1 ನಯವಿನಯ ಗುಣಯುಕ್ತೆ ಕನ್ಯೆ ಬಹು ಭಕ್ತಿಯುತೆವಯಸು ಕಾರಣವಲ್ಲ ಪ್ರಿಯ ನಿನ್ನ ಭಜಿಸೆ |ದಯತೋರಿ ಈ ಶಿಶುವ ಹಯಮೊಗನೆ ಉದ್ಧರಿಸೊವಯನಗಮ್ಯನೆ ಹರಿಯೆ ಭಿನ್ನಯಿಪೆ ನಿನಗೇ 2 ಮರುತ ಮತದಲಿ ದೀಕ್ಷೆ ಹರಿಗುರೂ ಸದ್ಭಕ್ತಿನೆರೆ ಬಂಧು ಜನ ಪ್ರೇಮ ಮರಳಿ ಆಧಮರಲಿಕರುಣೆಯನು ಮಾಳ್ಪಂಥ ವರಮತಿಯ ಕರುಣಿಪುದುಗರುಡವಾಹನದೇವ ಸರ್ವಾಂತರಾತ್ಮ 3 ಘೋರಭವ ಶರನಿಧಿಗೆ ತಾರಕವು ತವನಾಮವಾರವಾರಕೆ ನುಡಿಸು ಮರುತಾಂತರಾತ್ಮತಾರತಮ್ಯ ಜ್ಞಾನ ಸಾರವನೆ ತಿಳಿಸುತ್ತತೋರೋ ತವರೂಪವನೆ ಹೃದ್ಗುಹದಿ ಹರಿಯೇ 4 ಕಾಲ ಸರ್ವಗುಣಪೂರ್ಣಸರ್ವಜ್ಞ ಹರಿ ಎನ್ನ ಭಿನ್ನಪವ ಸಲಿಸೆಂದುಸರ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ವರಾಹ ಹರಿ ವಿಠಲ | ಕಾಪಾಡೊ ಇವನಾ ಪ ನಿರುತ ತವನಾಮ ಸ್ಮøತಿ | ಕರುಣಿಸುತ ಕಾಯೋಅ.ಪ. ತಾರಕವು ತವನಾಮ | ಸ್ಮರಣೆ ಮಾತ್ರದಿ ಎಂದುಒರಲುತಿದೆ ವೇದಗಳು | ಕರಿವರದ ಹರಿಯೇತರುಳ ಸಾಧ್ವೀ ಯುವಕ | ಮೊರೆಯಿಡುವನಂಕಿತಕೆಒರೆದಿಹೆನು ಅದರಿಂದ | ಕರೆದು ಕೈ ಪಿಡಿಯೋ 1 ಕಾಮವರದನೆ ದೇವ | ಕಾಮಿತಾರ್ಥಗಳಿತ್ತುನೇಮದಿಂ ಪೊರೆಯುವುದು | ಕಾಮಪಿತ ಹರಿಯೇ |ನೇಮ ನಿಷ್ಠೆಯಲಿಂದ | ಧೀಮಂತ ಪದಕೆರಗಿಸೌಮನಸ್ಯದಿ ಸೇವೆ | ಸಲ್ಲಿಸುವನಯ್ಯಾ 2 ಹರಿಯೆ ಸರ್ವೋತ್ತಮನು | ಸಿರಿವಾಯು ಮೊದಲಾದಸುರರೆಲ್ಲ ಕಿಂಕರೆಂಬ ಮತಿಯ ಕೊಟ್ಟುವರಜ್ಞಾನ ಭಕುತಿಯನೆ ಕರುಣಿಸುತ ಪೊರೆಯಯ್ಯಾವರದ ಗುರು ಗೋವಿಂದ ವಿಠಲ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು
ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು