ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ಯಾರು ಇಲ್ಲ ಎನಗೆ ನಿನ್ನ ಹೊರತು ವಾರಿಜಾಲಯೆ ತಾಯೆ ಪ ಪಾರತೋರೆ ಈಸಲಾರೆ ಅ.ಪ ಈ ದೇಹದ ತಂದೆ ತಾಯ್ಗಳು ಪೋದರು ಮೊದಲೆ ಆದರಿಸುವರಿನ್ಯಾರು ಕಾದುಕೋ ಕೈಬಿಡದಿರು ಕರುಣದಿ 1 ಪಾರಂಪರ್ಯದಿ ಜೀವರು ನಿನಗೆ ಪುತ್ರರಲ್ಲವೆ ಬಾರಿ ಬಾರಿಗೂ ಮೊರೆಯಿಡುವೆ ಭಕ್ತಾರ್ತಿಹಾರಿಣಿ ರುಕ್ಮಿಣಿ2 ವೆಂಕಟರಮಣನ ರಾಣೀ ವಿಶ್ವಜನನೀ ವಿವಿಧ ರೂಪಿಣಿ 3 ಆನಂದದಾಯಕೆ ನೀನು ಜಾನಕಿದೇವಿ ಕೈಬಿಡದಿರು 4 ಅರಿತು ಅರಿಯದೆ ಮಾಡಿದ ದುರಿತವ ಕಳೆಯಮ್ಮ ಪರದೇಶಿ ಅನಾಥ ನಾನು ಗುರುರಾಮ ವಿಠಲನರ್ಧಾಂಗಿಯೆ5
--------------
ಗುರುರಾಮವಿಠಲ
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ