ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ದೇವ ನೀನಹುದೋ ದೇವರದೇವ ನೀನಹುದೋ ಪ ದೇವ ರಿಪುವನದಾವ ದುರಿತಾಖ್ಯನಾವ ನಮಿತರ ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ ದೇವಕಿಯಲ್ಲವತರಿಸಿ ಗೋಕುಲವನ್ನು ಪಾವನವನ್ನು ಮಾಡಿ ಮಡುಹಿ ಮಾವನ ಮಧು- ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ ಜೀವ ಸಖನಾಗಿ ಪಾಂಡವರಿಗೆ, ಪಾರ್ಥ ಸೇವೆಯಲಿ ಸಂದು ಕೀಲಿಸಿ ಕೌರವರನ್ನು ಭೂವರನ ಹಯಮೇಧಕೊಲಿದು ಬಂದಾ 1 ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ- ವರ್ಮಜರು ಕೂಡಿ ನಡಸಿ ನೀಲಾಂಕನ ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ ಕರ್ಮವಶದಿಂದ ಬಭ್ರುವಾಹನನ ಕೈಯ ದುರ್ಮರಣವಾದ ವಿಜಯ ಕರ್ಣರನು ನಿತ್ಯ ನಿರ್ಮಳಿಕನಹುದೊ 2 ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ ದಂತಿಪುರಕೆ ಬಂದರಸನ ಹಯಮೇಧ- ಮಂ ಪಾಲಿಸಿ ತ್ರಿಜಗವನು ಪಾಂಡವರಿ- ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ 3
--------------
ಕವಿ ಲಕ್ಷ್ಮೀಶ
ಸಂಜೀವ ದೀಪ್ತಿಪೂರ್ಣ ಪ. ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1 ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2 ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3
--------------
ವಾದಿರಾಜ
ಆರು ಬದುಕಿದರಯ್ಯಹರಿನಿನ್ನ ನಂಬಿತೋರೋ ಈ ಜಗದೋಳಗೆ ಒಬ್ಬರನು ಕಾಣೆ ಪಕಲಹಬಾರದ ಹಾಗೆ ಕರ್ಣನನು ನೀ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆ ||ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆಮೊಲೆಯನುಣಿಸಲು ಬಂದ ಪೂತನಿಯ ಕೊಂದೆ 1ಕರಪತ್ರದಿಂದ ತಾಮ್ರಧ್ವಜನ ತಂದೆಯನುಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ||ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ಬೆರೆದೆ 2ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆಗರುಡವಾಹನ ನಿನ್ನ ಚರಿಯವರಿಯೆ ||ದೊರೆಪುರಂದರವಿಠಲ ನಿನ್ನನ್ನು ನಂಬಿದರೆತಿರುಪೆಯಾ ಹುಟ್ಟಲೊಲ್ಲದು ಕೇಳೊ ಹರಿಯೆ 3
--------------
ಪುರಂದರದಾಸರು