ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸುವ ಹರಿ ನಿರಂತರವು ಮನವೆ ಪಾದ ಸ್ಮರಣಿಯನು ನೆರೆನಂಬು ಪ ಕಂದ ಪ್ರಹ್ಲಾದನ ತಂದೆ ಭಾಧಿಸಲು ಗೋ ವಿಂದ ಘನ ಸ್ತಂಭದೊಳ್ ಬಂದು ತಾಮುದದಿ ಮಂದ ದನುಜನ ಬಿಡದೆ ಕೊಂದ ಶ್ರೀವರ ಮುಚು ಕುಂದ ವರದ ಯೆಂದು ನೀ ಭಜಿಸು 1 ಛಲದಿಂದ ಮಲತಾಯಿ ಸಲೆ ಧ್ರುವನ ಕಾನನಕೆ ಕಳುಹಲಾಕ್ಷಣವೆ ಶ್ರೀ ನಳಿನನಾಭ ಒಲಿದು ಪೊರಿದನು ಮಹಾಒಳಿತೆಂದು ಅವಗೆ ನಿಶ್ಚಲ ಪದವಿಯನು ಇತ್ತ ಜಲನಿಧಿಶಯನ 2 ಅರಸು ಮುನಿಶಾಪದಲಿ ಕರಿಯಾಗಿ ಜನಿಸಿ ಮ- ಕರ ಬಾಧೆಗೆ ಶಿಲ್ಕಿ ಮೊರೆಯನಿಡಲು ತ್ವರದಿ ಪೊರದಂಥ ಹೆನ್ನೆಪುರ ಲಕ್ಷ್ಮೀನರಶಿಂಹ ಸಿರಿ ಕೃಷ್ಣಾ 3
--------------
ಹೆನ್ನೆರಂಗದಾಸರು
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು