ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ನೀನು ತಿಳಿ ಮಮಕುಲವ ಪೇಳುವೆನು ತಿಳಿದು ಭವದ ನೆಲೆ ಪ ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ ಗಳಿಸುವ ಕುಲ ನಂದು ಅ.ಪ ಸೊಲ್ಲು ತಿಳಿಯುವಂಥ ಖುಲ್ಲ ಜನರ ಬಳಿ ನಿಲ್ಲದಂಥ ಬಲ್ಲಿದ ಕುಲ ನಂದು 1 ಹರಿಯ ಜರೆಯುವಂಥ ಪರಮ ದುರುಳರನೊದೆವಂಥ ಹರಿಹರಿಯೆಂದೆಂಬ ವರಸುಧೆಯಮೃತಭರಿತ ಪರಲೋಕದ ಅರಿವಿನ ಕುಲನಂದು 2 ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ ಭೂಮಿಯೊಳು ಶ್ರೀರಾಮರಹೀಮೆಂದು ನೇಮಿಸಿಕೊಂಡ ನಿಸ್ಸೀಮಕುಲವು ನಂದು 3
--------------
ರಾಮದಾಸರು
ಸ್ವಾಮಿಯ ನೆನೆಯೋ ಪಾಮರ ಮನಸೆ ನೀ ತಾಮಸವನು ನೀಗಿ ಪ ಕಾಮಾದಿಗಳ ಜೈಸಾಮಹಿಮ ಸತ್ಯ ಭಾಮೇಶಗತಿಯೆಂದು ನೇಮವಹಿಸಿ ಬಿಡದೆ ನಾಮ ಪೊಗಳುವರ ಕಾಮಿತಗಳನಿತ್ತು ಪ್ರೇಮದಿಂ ಕಾಯ್ವಂಥ 1 ಗೋಪ ಗೋಪತಿ ನಮಿತ ಗೋಪಿಯ ಪ್ರಿಯಬಾಲ ಪಾಪನಿವಾರಣ ಆ ಪರಬ್ರಹ್ಮನ ಶ್ರೀಪಾದ ಪೊಗಳಲು ತಾಪತ್ರಯಂಗಳ ಲೋಪಮಾಡುವಂಥ 2 ಪರಮ ಶ್ರೀಗುರು ಎಂದು ಪರಮಾತ್ಮ ಶ್ರೀರಾಮ ಚರಣಸಾನ್ನಿಧ್ಯಕ್ಹೊಂದು ನರಕಯಾತನೆ ಗೆಲಿಸಿ ಬರುತಿರ್ಪ ಕಷ್ಟಗಳ ಪರಿಹರಿಸಿ ಕರಪಿಡಿದು ಕರುಣದಿ ಸಲಹುವ 3
--------------
ರಾಮದಾಸರು