ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ಶ್ರೀ ಪ್ರಾಣದೇವರ ಸ್ತೋತ್ರಗಳು ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ ಗಾನ ಮಾಡುವಮತಿ ಸಾನುರಾಗದಿ ಕೊಡು ಪ ಶರಧಿಯ ಲಂಘಿಸಿಧರಿಜೆ ದೇವಿಪದ - ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1 ಹೇಮನಗರ ದಹಿಸಿ ಸತ್ವರ ರಾಮ ಪದಕೆ ನಮಿಸಿ ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ ತಾಮರಸಜಪದ ನೇಮದಿ ಐದಿದ 2 ಕುಂತಿಗರ್ಭದಿ ಜನಿಸಿ ರುಕ್ಮಿಣಿಕಾಂತನಣುಗನೆನಿಸಿ ಅಂತಕಾತ್ಮಜನ ಸಂತತ ಸಲಹಿದೆ ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3 ದೇಶಿಕಪತಿಯನಿಸಿ ಬದರಿನಿವಾಸನ ಪದ ಭಜಿಸೆ ವಾಸುದೇವಸರ್ವೇಶನೆಂದರುಹಿದೆ ದೂಷಿತ ಮತ ತಮ ನೇಸರಮಧ್ವನೆ 4 ಕಾಮಕ್ರೋಧದಿ ಬೆಂದೆ ನಾ ಬಲು ತಾಮಸದಲಿ ನೊಂದೆ ಶ್ರೀ ಮನೋಹರ ವರದೇಶ ವಿಠಲನ ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5
--------------
ವರದೇಶವಿಠಲ