ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮೃತ ನೀಡೆನಗೆ ಪ ಅಮೃತ ನೀಡಪಮೃತ್ಯುಕಳೆದು ಧ್ಯಾ ನಾಮೃತವೆಂಬ ಸಾಮ್ರಾಜ್ಯ ಸಂಪದವಿತ್ತು ಅ.ಪ ಜರಾ ಮರಣವ ಗೆಲಿಪ ಅಮೃತ ದುರಿತ ಪರ್ವತಲೋಪ ಭರದಿಗೈದು ಮಾಯಮರವೆ ಹರಿಗೆ ಸ್ಥಿರ ಪರಮಪಾವನ ಮಾಳ್ಪ ಹರಿಸ್ಮರಣಾನಂದ 1 ಭವಬಾಧೆಯ ಗೆಲಿಪ ಅಮೃತ ಜವನ ಭಯವ ಲೋಪ ಜವದಿಗೈದು ತ್ರಯ ಭುವನದೊಳ್ಮಿಗಿಲಾಗಿ ಧ್ರುವನು ನಿರುತಮಾಗಿ ಸವಿದ ಮಹದಾನಂದ2 ತಾಮಸಗಳನಳಿವ ಅಮೃತ ಪಾಮರತನ ತುಳಿವ ಆ ಮಹ ವೈಕುಂಠದ ವಿಮಲ ಪದವಿಯನು ಕ್ಷೇಮದೀಯುವ ಶ್ರೀರಾಮ ಪ್ರೇಮಾನಂದ 3
--------------
ರಾಮದಾಸರು
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ವಲ್ಲಭೆ ಬಲು ಸುಲಭೆ ಪ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ 1 ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2 ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು 3 ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ 4 ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ 5
--------------
ವಿಜಯದಾಸ
ಸುಜನ ವಂದ್ಯನ ಪಕಾಮ ತಾಮಸಗಳಲಿ ಬಳಲುತ್ತ ಸೀಮೆ ಸೀಮೆಗಳನುಸುತ್ತುವೀಮನೋರಥಗಳಲೇನು ಗುರುವಿನನೇಮ ಕೀರ್ತನೆಯನಿರಾಮಯಾಮಲಾರ್ಥ ನಿಷ್ಕಾಮ ರಾಮಣೀಯಕವನು ಪ್ರೇಮದಿಂದ ಪೊಗಳುತ 1ಯೋಗ ರಾಗದಿಂದ ಮನವ ನಾಗಲಾಗಲಧಿಕ ಭಕ್ತಿಯೋಗ ವೇಗ ಜನಿತ ಸದನುರಾಗದಿಂದ ನಿಲ್ಲಿಸಿರಾಗ ರೋಗವೆಂಬ ತಮವ ನೀಗಿ ಸದ್ವಿರಾಗದಿಂದ ಆಗಮಾಗಮಾಂತ ವಚನದಾಗು ಪೋಗನರಿತು ನೀ 2ಕಾಲ ಕಾಲದಲ್ಲಿ ಬಾಲಲೀಲೆುಂದ ನಡೆದು ನುಡಿದುಶೀಲ ಲೋಲನಾಗಿ ಲೋಕ ಜಾಲ ಮೂಲವಾಮೇಲೆ ಮೇಲೆ ತಿಳಿದು ಬೆಳೆದು ನಲಿದು ಭಕ್ತಪಾಲ ಗೋಪಾಲಯತಿ ಕೃಪಾಲ ಸದ್ವಿಶಾಲಸುಖವ ತಳೆದು ನೀ 3
--------------
ಗೋಪಾಲಾರ್ಯರು