ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ ಕೊಳಲನೂದುವ ಬಗೆಯ ನಳಿನಜಾಂಡವು ತಾನೆ ತಲೆದೂಗುತಲಿದೆ ಕುಳಿತಿರೆ ವಶವಲ್ಲವೆ ಪ ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ- ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು ಲೋಲ್ಯಾಡದೆ ಬಿಡರು 1 ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು ಕಾಮತನಯ ಕಾಮದೇವ ಸೋಮಶೇಖರ ತಾನು ತಾಮರಸಾಸನ ಪ್ರೇಮಾದಿ ನಲಿಯುವ ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ ಸೇವೆ ಮಾಡುವರು 2 ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು ತೋರುವರಿಲ್ಲಿ ಆನಂದ ಈ ರಭಸದಿ ವೇಣು ಪೂರೈಸಿ ಸುಖವೀವ ಧೀರ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀಪತಿ ಭಯಹಾರಿ ರಕ್ಷಿಸು ತಾಪತ್ರಯವಾರಿ ಕೋಪಲೇಶನ ಮನೋನುಪಹಾರಿ ಭೂಪತಿರೂಪವಿಹಾರಿ ಪ. ಅಖಿಳ ಜನನಿ ಭರ್ತಾ ಪಾಲನ ಮಹಾಧುರಧರ್ತಾ ಭಕುತಿಯ ಪಾಲಿಸು ಭಯ ಪರಿಹರ್ತಾ 1 ಕಾಮಿತ ಫಲದಾಯಿ ತುಲಸೀಧಾಮ ಶೇಷಶಾಯಿ ತಾಮರಸಾಸನ ದೇವನ ತಾಯಿ ಶ್ರೀ ಮಹೇಶನೀ ತ್ವರಿತದಿ ಕಾಯಿ2 ನಾಗಭೂಧರೇಶ ಕರುಣಿಸು ಬೇಗದಿ ಸರ್ವೇಶ ರಾಗ ರೋಗ ಗಣ ನೀಗು ನಿನ್ನಡಿಗೆ ಬಾಗುವೆ ಲಕ್ಷ್ಮೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ