ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನತಾಪ ಘನತಾಪ ಘನತಾಪ ಸಂಸಾರ ನೆನೆಸಲಳವಲ್ಲದನು ಕನಸಿನೋಳಭವ ಪ ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ ವನಿತೆಯರ ತಿನಿಸು ತನುಜ ಅನುಜರ ಮುನಿಸು ಜನರನೊಲಿಸುವುದಿನಿಸು ಘನತಾಪ ಅಭವ ತನುರೋಗ ಮನರೋಗ ಧನದ ವಿಯೋಗ ಇನಿತೆಲ್ಲವೊಂದಾಗಿ ಘನಬಾಧಿಸುವುವಭವ 1 ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು ಕಟ್ಟಿಕಾದುವ ಮಹಕೆಟ್ಟತಾಪಭವ ತಾಪ ಕೊಟ್ಟವರ್ಹಂಗಿನ ತಾಪ ಹುಟ್ಟುಸಾವಿನ ಅತಿ ಕಷ್ಟತಾಪಭವ 2 ಮನುಜರೂಪದ ಮಹ ಘನತೆಯನು ಕೆಡಿಸಿ ಕ್ಷಣದಿ ತೋರೆರಗುವ ಕನಿಕಷ್ಟ ಅಭವ ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸಾಕು ಸಾಕೊ ನಿನ ಸಂಗ ಶ್ರೀಕಾಂತ ನೃಹರಿ ಯಾಕಿಂತು ನಿರ್ದಯವೊ ಭಕ್ತರೊಳು ನಿನಗೆ ಪ. ಕರಿಗಿರಿ ಶಿಖರದಲಿ ನೆಲಸಿರುವ ನೃಹರಿಯೆ ಗುರುಗಳು ಸಹಿತದಲಿ ನಿನ್ನ ಗಿರಿ ಏರಿ ಪರಮ ಸಂತೋಷದಲಿ ದರುಶನಕೆ ನಾ ಬರಲು ಸಿರಿಸಹಿತ ಪವಡಿಸಿ ಕದವ ಹಾಕಿಸಿದೆ 1 ಬಂದ ವರ ಭಕ್ತರಿಗೆ ಸಂದರುಶನವ ಕೊಡದೆ ಮಂದಿರದ ಬಾಗಿಲ್ಹಾಕಿಸಿದೆಯಲ್ಲೊ ದೇವ ಇಂದೆನ್ನ ಮನಕೆ ಪರಿತಾಪವನೆ ಕೊಟ್ಟೆ ಚಂದವೇ ನಿನಗಿನ್ನು ಮಂದರೋದ್ಧರನೆ2 ನಿನ್ನ ದರುಶನ ಕೊಡದ ಘನ್ನ ಪಾಪವನೆ ನಾ ಮುನ್ನೇನ ಮಾಡಿದೆನೊ ಪನ್ನಗಶಯನ ಎನ್ನ ಕೊರಗಿಸುವುದು ಇನ್ನು ನಿನಗೆ ಹಿತವೆ ಮನ್ನಿಸಿ ಸಲಹಬೇಕಿನ್ನು ಶ್ರೀ ಹರಿಯೆ 3 ಕದವೇಕೆ ಹಾಕಿಸಿದ್ಯೊ ಪದುಮನಾಭನೆ ದೇವ ಒದಗಿ ಬಹ ಭೃತ್ಯರನು ಒದೆದು ನೂಕಿ ಯದುವೀರ ನಿನಗಿನ್ನು ಎಷ್ಟು ನಿದ್ರೆಯೊ ಕಾಣೆ ಕದನವಾಡುವೆ ನಿನ್ನೊಳು ಪ್ರಹ್ಲಾದವರದ 4 ವರಭಕ್ತರು ಕಾದಿರಲು ದರುಶನ ಕೊಡದೆ ನೀ ಸಿರಿಸಹಿತ ಪವಡಿಸಿದೆ ಘನವೆ ನಿನಗಿನ್ನು ಸುರವಂದ್ಯ ಗೋಪಾಲಕೃಷ್ಣವಿಠ್ಠಲ ಹೃದಯ ಅರಮನೆಯೊಳು ನೆಲಸಿ ಸಲಹಯ್ಯ ಸತತ 5
--------------
ಅಂಬಾಬಾಯಿ