ಶ್ರೀಪತಿ ಭಯಹಾರಿ ರಕ್ಷಿಸು ತಾಪತ್ರಯವಾರಿ
ಕೋಪಲೇಶನ ಮನೋನುಪಹಾರಿ ಭೂಪತಿರೂಪವಿಹಾರಿ ಪ.
ಅಖಿಳ ಜನನಿ ಭರ್ತಾ
ಪಾಲನ ಮಹಾಧುರಧರ್ತಾ
ಭಕುತಿಯ ಪಾಲಿಸು ಭಯ ಪರಿಹರ್ತಾ 1
ಕಾಮಿತ ಫಲದಾಯಿ ತುಲಸೀಧಾಮ ಶೇಷಶಾಯಿ
ತಾಮರಸಾಸನ ದೇವನ ತಾಯಿ
ಶ್ರೀ ಮಹೇಶನೀ ತ್ವರಿತದಿ ಕಾಯಿ2
ನಾಗಭೂಧರೇಶ ಕರುಣಿಸು ಬೇಗದಿ ಸರ್ವೇಶ
ರಾಗ ರೋಗ ಗಣ ನೀಗು ನಿನ್ನಡಿಗೆ
ಬಾಗುವೆ ಲಕ್ಷ್ಮೀಶ 3