ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ಪ ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು ಆಡಿÀದವೆಲ್ಲ ಹರಿಯ ರೂಪವೆಂದು ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು ಕೂಡಿದದ್ದೆಲ್ಲ ಹರಿ ಭಕ್ತರೆಂದು 1 ತಾಪತ್ರಯಗಳೆಲ್ಲ ಮಹಾ ತಪಸು ಎಂದು ರೂಪಗಳೆÀಲ್ಲ ಹರಿಕಾಂತಿ ಎಂದು ವ್ಯಾಪಾರ ಹರಿ ಅಧೀನವೆಂದು 2 ತಾರತಮ್ಯಕಿದು ಪರಲೋಕದಿ ಸರಿಯಿಲ್ಲ ಸಿರಿ ಹರಿಯದೊರೆ ತನಗೆ ಎಂದೆನುತಾ ನಿತ್ಯ ಕಾಲಕಾಲಕೆ ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ 3 ಒಲಿಸಿ ಒಲಿಸಿ ಒಲಿದು ಒಲಿದು ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು 5
--------------
ವಿಜಯದಾಸ
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆಮುಂಬೆಳಕು ಕಾಣಿಸುತ್ತ ರವಿಕೋಟಿಯಂ ಪಳಿಯುತಿದೆನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ ಷೋಡಶಾಕಾರವಹ ಸೋಮ ಕಳೆಗುಂದಿಹುದುಖೋಡಿ ಜನನ ಮರಣ ಚಕ್ರ ತಾ ಕೊರಗಿದುದುಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದುಆರೂಢನೊಲಿದುಪ್ಪವಡಿಸ ಯತಿರಾಜ1 ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದುಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದುಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದುನಿರ್ಲೇಪನುಪ್ಪವಡಿಸ ಯತಿರಾಜ2 ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವುದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವುನಷ್ಟರಾರುವರೆಂಬ ಶಿವನಿಕರ ವೋಡಿದವುಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ3 ಭ್ರಮರ ಕಮಲ ತಾನಿಲ್ಲಿ ಬಿರಿಯುತಿದೆನಿಶ್ಚಿಂತನೊಲಿದುಪ್ಪವಡಿಸ ಯತಿರಾಜ 4 ಮೂರ್ತಿ ಚಿದಾನಂದಗುರುನಾಥನುಪ್ಪವಡಿಸ ಯತಿರಾಜ 5
--------------
ಚಿದಾನಂದ ಅವಧೂತರು
ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯುಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1 ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವುಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2 ಸುಳಿ 3 ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವುಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4 ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5
--------------
ಚಿದಾನಂದ ಅವಧೂತರು