ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಮರಿಸಿ ಸುಖಿಸೊ ನರನೆ - ಗುರುರಾಯರನನುದಿನ ಪ ಶರಣು ಜನರ‌ಘ ತರಿದು ಕರುಣದಿ ಚರಣ ಸರಸಿಜ ಹರುಷದಿಂದಲಿ ಅ.ಪ ನಳಿನ ಬಾಂಧವ ಕುಲದಿ ಅವತಾರ ಮಾಡಿದೆ ಇಳಿಜರಮಣನಾಜ್ಞದಿ ಕಲಿಯುಗದಿ ದ್ವಿಜರನು ಸಲಹಲೋಸುಗ ಜಗದಿ ಜನಿಸಿ ಗುರುಗಳ || ವಲಿಮೆಯನು ತಾಪಡೆದು ಕೊರಳಲಿ ತುಲಸಿ ಮಾಲೆಯ ಧರಿಸಿ ಹರಿಯನು ವಲಿಸಿ ಥಳ ಥಳ ಪೊಳೆವವ ಸ್ತಂಬದಿ ಕುಳಿತ ಶ್ರೀರಂಗವಲಿದ ದಾಸರ 1 ಮಾನಿನಿಯಳ ಮಾನರಕ್ಷಿಸಿದೆ ಶ್ರೀ ಪವ ಮಾನನಯ್ಯನ ಕರುಣವನು ಪಡೆದು ಸ್ತುತಿಸಿದಿ ವನು ಪಾಲಿಸಿ ಗುರು ಭವ ಕಾನನಕೆ ಕೃಶಾನುವೆನಿಸಿದ ಮಾನವಿ ಪುರ ನಿಲಯರನು ಅನುಮಾನವಿಲ್ಲದೆ ಮಾನಸದಿನೀ 2 ಶ್ರೀಮಧ್ವಾಚಾರ್ಯ ಸುಮತ ಶರಧಿಗೆ ಹಿಮ ಧಾಮನೆನಿಸಿ ನಿರುತ ಸೇವಿಪರಿಗೆ ಕಾಮಿತಾರ್ಥಗಳಿಗೆ ತ್ವರಿತ ನೀಡಿ ಶಿರಿವರ ಶಾಮಸುಂದರ ಸ್ವಾಮಿ ಪರನೆಂಬೊ | ಪ್ರೇಮದಿಂದಲಿ ಹರಿಕಥಾಮೃತ ಈ ಮಹಾಸುಗ್ರಂಥ ರಚಿಸಿದ ಹೇಮ ಕಶ್ಯಪ ತನಯರನುಜರ 3
--------------
ಶಾಮಸುಂದರ ವಿಠಲ
ತಾಪಡೆದು ಬಂದುದಕುಪಾಯವೇನು |ಕೋಪದಲಿ ಶ್ರೀಪತಿಯ ಶಾಪಿಸಿದರೇನು ಪ.ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು |ಧಾನ್ಯಧನಗಳ ಬೇಡಿ ಧರೆಗಿಳಿದರೇನು |ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು |ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು 1ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು |ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು |ಅರಿಯದ - ಮನುಜರಿಗೆ ಆಲ್ಪರಿದರೇನು 2ಹೋಗದೂರಿನ ದಾರಿಕೇಳಿ ಮಾಡುವದೇನು |ಮೂಗನ - ಕೂಡ ಏಕಾಂತವೇನು ||ಯೋಗೀಶ ಪುರಂದರವಿಠಲನ ನೆನೆಯದವ |ತ್ಯಾಗಿಯಾದರೆ ಏನು ಭೋಗಿಯಾದರೆ ಏನು 3
--------------
ಪುರಂದರದಾಸರು