ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾದರೇನು ಗುರು ಪಡದನಕಾ | ತಾನೊಲಿಯನು ಹರಿ ಕಾವನ ಜನಕಾ ಪ ಪರಿಪರಿಸಾಧನದಲಿ ಬಳಲುವರೆ | ಪರಸ ಮುಟ್ಟದೆ ಲೋಹವಾಗುವದೇ ಕನಕಾ1 ಪತಿತೋದ್ಧಾರಗುರು ಸ್ವಸುಖದಾನಿ | ವೃತ ತಪಸಿದ್ಧಿಯ ಬಹು ಸುಖ ಕ್ಷಣಿಕಾ2 ಗುರು ಮಹಿಪತಿಪ್ರಭು ಜ್ಞಾನಾಂಜ ನಿಡದೇ | ಧರೆಯೊಳಾಹನೇ ನರ ಚಿದ್ಘನ ಧನಿಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾದರೇನು ಗುರುದಯ ಪಡದನಕಾ| ತಾನೊಲಿಯನು ಹರಿ ಕಾವನ ಜನಕಾ ಪ ಪರಿ ಸಾಧನದಲಿ ಬಳಲುವರೇ| ಪರಸ ಮುಟ್ಟದ ಲೋಹವಾಗುವದೇ ಕನಕಾ 1 ಪತೀತೋದ್ದರ ಗುರು ಸ್ವಸುಖದಾನಿ| ವೃತ ತಪದಿ ಸಿದ್ದಿಯ ಬಹ ಸುಖ ಕ್ಷಣಿಕಾ2 ಗುರು ಮಹಿಪತಿ ಪ್ರಭು ಜ್ಞಾನಾಂಜನಿಡದೇ| ಧರಿಯೊಳಾಹನೇ ನರ ಚಿದ್ಬನ ಧನಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ ನರಿಗಳ ಕೂಗಿಗೆ ಹುಲಿಯಂಜುವುದೆ ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ ಹೀನ ಜನರು ಅಪಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ 1 ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು ಮುಂದೆ ಎನಗೆ ಬಲು ತೊಂದರೆಗಳಿರುವು ವೆಂದು ಪೇಳುವರು ಮಂದರಧರನ 2 ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು ಘನತೆ ಎಂತೆಂದು ಜರಿಯುತಲಿಹರು ಮನವನರಿಯರು ಧನ ಪಿಶಾಚಿಯನು ಮನದಿಂದ ತೊಲಗಿಸಿ ಮನದಲಿ ನೆಲಸಿಹ ವನರುಹ ನಯನನ 3 ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ ಜಂಭದ ಮಾತ ನಂಬದೆ ಇರಲು ಹಂಬಲಿಸುವರು ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲಿವೀಯುತವ ಅಂಬುಜನಾಭನ 4 ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ ಗತಿ ತೋರುತಲಿರೆ ಚತುರತೆಯೇತಕೆ 5
--------------
ವಿದ್ಯಾಪ್ರಸನ್ನತೀರ್ಥರು
ಬಿಡೋ ಇನ್ನು ಬಿಡೋ ಇನ್ನು ಪ ಕಡೆಗಾದರೂ ನಿನ್ನ ಹುಡುಗು ಬುದ್ಧಿಯನು ಅ.ಪ. ಜೀರ್ಣವಾಯಿತು ದೇಹವು ನಿನಗೆ ಜೀರ್ಣವಾಗಲಿಲ್ಲ ನೇಹವು ಕೊನೆಗೆ 1 ವಾಹನ ಮೃಷ್ಟಾನ್ನಗ ಳಾ ಮಹನೀಯನೊಲಿಸವೊ ಮೂಢ 2 ಸ್ನಾನ ದಾನ ಅಧ್ಯಯನಾದಿಗಳಿಗೆ ಶ್ರೀನಿವಾಸ ತಾನೊಲಿಯನೊ ಬರಿದೆ 3 ತಾಳ ಮೇಳ ಸಂಗೀತಾದಿಗಳನು ಕೇಳನು ಪ್ರೇಮದ ಭಾವವಿಲ್ಲದೊಡೆ 4 ಚಿತ್ತ ಮಲಿನವಿದ್ದು ಸತ್ಕಾರವಗೈಯ್ಯೆ ಆಪ್ತ ಕಾಮ ತಾ ತೃಪ್ತಿಯ ಪೊಂದನು 5 ಶ್ರೀಧರ ತಾ ದಯದಿಂದೊಲಿದಲ್ಲದೆ ಸಾಧನ ಮಾತ್ರಕ್ಕೆ ಒಲಿಯಲು ಸಾಧ್ಯವೆ 6 ನಳಿನನಯನನಾಜ್ಞೆಯ ನೀ ಪಾಲಿಸೆ ಒಲಿವನು ನಿಜವಿದು ನಲಿಯುತ ನಿನಗೆ 7 ಮೃಡವಂದಿತ ಶ್ರೀ ಕರಿಗಿರೀಶನೊಳ್ ದೃಢ ಭಕ್ತಿಯನಿಡು ಬಿಡದೆ ಪೊರೆವನೊ 8
--------------
ವರಾವಾಣಿರಾಮರಾಯದಾಸರು
ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ ಪ ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ ಅ.ಪ. ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆ ವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿ ಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರ ಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು 1 ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವು ಧನ್ಯ ಧನ್ಯರು ಮಾತೆ ಭಕ್ತಿಮೂರ್ತೆ ವಿಧಿ ರುದ್ರಸೇವ್ಯ ಪದ ಪುಷ್ಕರಳೆ ಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ 2 ನೀನೊಲಿಯದ ಜೀವ ಏನು ಸಾಧನೆ ಮಾಡೆ ಪ್ರಾಣವಿಲ್ಲದ ದೇಹ ಶೃಂಗರಿಸಿದಂತೆ ವಾನರ ಪ್ರತಿಬಿಂಬ ಜಯೇಶವಿಠಲ ತಾನೊಲಿಯ ಅವಗೆಂದು ನಿನ್ನವರ ಕರವಶನು 3
--------------
ಜಯೇಶವಿಠಲ
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1 ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2 ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |ಚರಣಕಮಲಷಟ್ಪದ ಪಾಲಿಸು ಕಾಷಾಯವಸನಭೂಷಾ ಪದುರ್ಮತಭುಜಗಕುಘರ್ಮ ವಿನಾಯಕಕರ್ಮಬದ್ಧವ್ರತಾ |ಶರ್ಮತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||ಭರ್ಮ ಸಮಾಂಗ ಅಧರ್ಮ ಶಿಕ್ಷಕರಿಚರ್ಮಾಂಬರ ಪ್ರೀತ |ಕಿರ್ಮೀರಾರಿ ಸುಶರ್ಮ ತೀರ್ಥಸಖಕರ್ಮಂದಿಪ ನಾಥ 1ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |ಕಾಮಿತ ಫಲದಧರಾಮರವಂದಿತ ಸ್ವಾಮಿ ನಮಿಪ ಭಕ್ತ ||ಶ್ರೀಮಂದಾರಅನಾಮಯ ಸದ್ಗುಣಧಾಮನೆ ಸುವಿರಕ್ತಾ |ಪಾಮರದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ 2ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||ಸಾನುರಾಗದಲಿ ಪೋಣಿಸುಸನ್ಮತಿಮೌನಿ ಕುಲಾಧೀಶ |ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ 3
--------------
ಪ್ರಾಣೇಶದಾಸರು