ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಶೆ ಅಳಿಯದೆ ಮನದ ರೋಷವಡಗದೆ | ವೇಷ ದಂಭಕಗೆಲ್ಲಿ ಶಿವಯೋಗವು ಪ| ತನ್ನ ತಾನರಿಯದೆ ಉನ್ಮತ್ತದಿಂದಲಿ ನನ್ನದು ನಾನೆಂದು ಜಲ್ಪಿಸುತ || ಕುನ್ನಿಯಂದದಿ ಕೋಟಲೆ ಯೊಳಗಿಹ ಹೀನ ಮನುಜಗೆಲ್ಲಿ ಶಿವಯೋಗವು 1 ಎಲಬು ತೊಗಲು ಮಲ ಮೂತ್ರದಿ ತೋರುವ | ಹೊಲಸಿನ ದೇಹವು ತಾನೆನುತ || ಹಲವು ಪಾಪಂಗಳನು ಹೇಸದೆ ಮಾಡುವ | ಕುಲಹೀನನಿಗೆಲ್ಲಿ ಶಿವ ಯೋಗವು 2 ಆರು ವೈರಿಗಳಿಗೆ ವಶವಾದನು ಈ ದೀನ | ವಾರಿಜನಾಭನ ಚರಣವನು || ಸೇರಿ ತನ್ನ ಹಿತವ ಮಾಡಿಕೊಳ್ಳದಾ- |ಚಾರಿಗೇಡಿಗೆಲ್ಲಿ ಶಿವ ಯೋಗವು 3 ಮೂರು ದೇಹಕೆ ಮೀರಿ ಬೇರೆ ತಾನಾಗದೆ | ಆರು ಇಂದ್ರಿಯಗಳಿಗೆ ವಶವಾಗಿಯು || ನಾರಿಯರ ಸಂಗ ಸುಖವ ಬಯಸುವ | ಕ್ರೂರ ಮನುಜನಿಗೆಲ್ಲಿ ಶಿವ ಯೋಗವು 4 ಶ್ರೀ ಗುರು ವಿಶ್ವಪತಿಯ ಪದ ಕಮಲವ | ಬೇಗದಿ ಸೇರಿ ಸುಖಿಯಾದೆ || ರಾಗರೋಷದಿ ತನ್ನಾಡಿತವ ತಾ ಮರೆತಂಥ | ಭೋಗಲಂಪಟಗೆಲ್ಲಿ ಶಿವಯೋಗವು ? 5
--------------
ನರಸಿಂಹ
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು 1 ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2 ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ3 ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ 4 ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ 5
--------------
ಚಿದಾನಂದ ಅವಧೂತರು
ತಿಳಿ ತಿಳಿ ನೀ ತಿಳಿ ತಿಳಿ ನೀ ಅಳಿಯದಾಗಿಹ ಸ್ಥಿರಪದವಾ ಪ ತೋರಿ ಅಡಗುವ ಜಗಕಾಧಾರ ತೋರಿಕೆ ಅಡಗಲು ತಾನುಳಿವಾ ಪಾರಮಾರ್ಥವೆ ತಾನೆನುತಾ 1 ಅನಿಸಿಕೆಯೆಲ್ಲವು ಪುಸಿಯಿಹುದೆಂದು ಘನಾನುಭವವಾ ನೀ ಪಡೆಯುತಲಿ ಅನುದಿನ ಮನನವ ಮಾಳ್ಪುದು ನಿನ್ನೋಳು ಅನುಭವವಾ ದೃಢಪಡಿಸೈ ವಿನುತ ಶಂಕರಗುರುನುಡಿಯಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ದಾಸರೆಂದರೆ ಪುರಂದರದಾಸರಯ್ಯ ಪ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ 1 ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ 2 ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ3 ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ4 ಪುರಂದರ ದಾಸರಿವರೈಯ 5
--------------
ವ್ಯಾಸರಾಯರು
ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ. ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ 1 ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ 2 ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ 3 ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ 4 ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ 5
--------------
ಮೋಹನದಾಸರು
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿಆಡಲೇನವ ಆನಂದವಿಹ ಸುಖವಪಬಾಲ ಶಿಶುಲೇಲೆಗಳ ಬಗೆ ಬಗೆಯ ಲಾಲಿಸುತಶೂಲಧರಸುತರೀಗ ಬಂದರೆನುತ್ತಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ1ಸತಿವಿನೋದವ ಮಾಡೆ ಸರಸವನೆ ಮಾಡುತ್ತಅತಿ ಆದಿವಸ್ತು ತಾನೀಕೆಯನುತಾಮತಿಭ್ರಾಂತನಾಗದಲೆ ಮಂಗಳನು ತಾನೆನುತಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ2ಬಡತನವು ಬಂದು ಕಾಡುತ್ತಲಿರೆ ನೋಡುತ್ತದೃಢಬುದ್ಧಿಯಾಗಿ ತಾನೀಗಲಿರುತಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತಪಡದೆ ಆಯಾಸ ಸುಖವಾಸಿಯಾಗಿರುತ3ಬಡಿದಾಡುತಿಹ ಗೃಹದ ಜನರುಗಳ ನೋಡುತ್ತಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತಕಡೆಗಣಿಸಿದವರ ಅತ್ತಿತ್ತ ಮಾಡುತ್ತಕಡಹನಿಶ್ಚಲದಿಂದ ಮತಿಶಾಂತವಿರುತ4ನಿಂದ್ಯದೂರಪವಾದವನು ಕೇಳುತ್ತಮಂದಶ್ರವಣನೋ ಎಂಬ ತರದಲಿರುತನಿಂದುದೃಢ ಚಿತ್ತದಲಿ ನಿರ್ಲೇಪ ತಾನೆನುತಬಂಧಹರ ಚಿದಾನಂದ ತಾನಾದಗೆನುತ5
--------------
ಚಿದಾನಂದ ಅವಧೂತರು