ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾದ್ದು ರಾಮನ ರೂಪಿನ್ನೆಂಥಾದ್ದು ಪ ಎಂಥಾದ್ದು ಶ್ರೀರಾಮನ ರೂಪಾ ನಿಂತು ಭಜಿಪತ್ಯಾನಂದಗೊಳಿಪಾ ಸಂತ ಕುಮುದ ಮಿತ್ರನು ತಾನೆನಿಪಾ ಆಹಾ ಚಿಂತಿಪರ ಜಗತ್ರತ್ತಿವಾಸರು ನಿರುತದಿ ಅಂತರಂಗದ ಜ್ಞÁನ ಚಕ್ಷು ಗೋಚರ ರೂಪಿನ್ನೆಂಥದ್ದು1 ಸುಷ್ಟವಾದನಿಷ್ಟಗಳು ಎಷ್ಟು ಬಳಲಿಪವು ಪಗಲಿರುಳು ಕಷ್ಟಬಡುತಿಹವಷ್ಟಾಂಗಗಳು ಆಹಾ ದೃಷ್ಟಗೋಚರ ಸ್ವಾಮಿ ಕಷ್ಟಕಳೆದು ನಮ್ಮ ನಿಷ್ಟಪೊಯ್ದೋಡಿಸೆ ತುಷ್ಟಗೊಳಿಪ ರೂಪಿನ್ನೆಂಥಾದು 2 ಸ್ಥಿರಮೂರ್ತಿ ನೀನಹುದಲ್ಲೆ ಸುರವೃಂದಕೆ ನೀ ಚೆಂದನಲ್ಲೆ ಮರುಳು ಮನುಜ ನಾನು ಮರೆದು ಬಳಲಿಪೆನು ಕರವ ಮುಗಿವೆ ತೋರಂಥಾದು 3
--------------
ನರಸಿಂಹವಿಠಲರು
ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ ಚೆಲುವ ಕುದುರೆ ಕಂಡೀರ್ಯಾ ಮಧ್ವರಾಯರಿಗೊಲಿದ ಕುದುರೆ ವಾದಿರಾಜರ ಪೊರೆದ ಕುದುರೆ ಇಂದಿರಾ ದೇವಿಯನಪ್ಪಿದ ಕುದುರೆ ಬಂದರೆ ನರರು ಬೆದರದಂಥ ಕುದುರೆ 1 ಮಂದರಗಿರಿಯನ್ನೆತ್ತಿದ ಕುದುರೆ ಚಂದಿರನಂತೆ ಪೊಳೆಯುವ ಕುದುರೆ ಸೋದೆಯ ಪುರದೊಳಿರುವ ಕುದುರೆ ಮೋದದಿಂದ ಮೆರೆಯುವ ಕುದುರೆ 2 ನರನ ರಥವನು ಏರಿದ ಕುದುರೆ ಸ್ಮರನ ತಾತನೆನಿಪ ಕುದುರೆ ಸುರತರುವನೆ ಭೂಮಿಗೆ ತಂದ ಕುದುರೆ 3 ಕಡಲೆ ಹೂರಣ ಮೆಲುವ ಕುದುರೆ ಪಂಡರಪುರದಿ ಮೇದ ಕುದುರೆ ಪುಂಡರೀಕನಿಗೆ ಒಲಿದಿಹ ಕುದುರೆ ಪಾಂಡವರನೆ ಪೊರೆದ ಕುದುರೆ 4 ರಾಜನಾಥನೆನಿಪ ಕುದುರೆ ವಾಜಿವದನ ತಾನೆನಿಪ ಕುದುರೆ ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ ಕಂಜನಾಭನೆನಿಪ ಕುದುರೆ 5
--------------
ವಿಶ್ವೇಂದ್ರತೀರ್ಥ
ನಾಚಿಸಿದೆಯ ದೇವಯನ್ನ ಎಲ್ಲಈ ಚರಾಚರ ತುಂಬಿಹ ವ್ಯುತ್ಪನ್ನ ಪ ಶ್ರೀಗಿರಿ ನೋಡುವೆನೆಂದು ನಾಸಾಗಿ ಪಯಣಗೊಂಡು ಬಂದುರಾಗವುದಿಸಿ ಮನಕಿಂದು ಮುಂದೆಭೋಗ ತರದ ಮನ ತೂರಿತು ನಿಂದು 1 ಮಧ್ಯಾಹ್ನ ಬಿಸಿಲೊಳು ನಡೆಯೆ ನಾನುಅದ್ವಯವಿಲ್ಲದೆ ಹಾದಿ ನೀರ್ಗುಡಿಯೆಇದ್ದ ಚೈತನ್ಯ ತಾ ನುಡಿಯೆ ಇಂತುಹೊದ್ದ ಶರೀರ ಬಳಲಿ ನೆಲಕೆಡೆಯೆ 2 ಧರಣಿಯ ಸುರರೂಪ ತಾಳಿ ನೋಡೆವರಣ ವರಣ ರುದ್ರಾಕ್ಷಿ ಚಾಳಿಚರಣ ಕಿರಣದಲ್ಲಿ ಹೂಳಿ ನಾನುಗುರುವೆ ಎಂದು ನುಡಿವುದ ಕೇಳಿ 3 ಎಲ್ಲಿ ಪೋಗುವೆ ಎಂದು ಕೇಳೆಮಲ್ಲಿಕಾರ್ಜುನನ ನೋಡಿಯೇ ಬಹೆನೆಂದುಸೊಲ್ಲುಡುಗಲು ನಾನಿತ್ತೆಂದು ಗುರುಸುಳ್ಳು ಆದನೆ ಸರ್ವ ಪೂರಿತನಿಂದು 4 ಸರ್ವರೂಪದು ಮೃಷೆಯಾಯ್ತು ಎಲ್ಲಸರ್ವಜನರಿಗೆ ಬೋಧಿಸುವಡೇನಾಯ್ತುಸರ್ವತಾನೆನಿಪುದೇನಾಯ್ತು ಎಲ್ಲಸರ್ವರನುಳಿದು ಬಂದಿಹುದೊಳಿತಾಯ್ತು 5 ಇಂತು ಬುದ್ಧಿಗಳಿಂದ ಝಡಿಯೆ ಎಲ್ಲಅಂತು ಕೇಳುತ ನೀವು ಆರೆಂದು ನುಡಿಯೆನಿಂತಲ್ಲಿ ದೃಶ್ಯವ ಪಡೆಯೆ ಕಂಡುಸಂತೋಷದಿಂ ನಾ ಸಾಷ್ಟಾಂಗವೆರಗೆ 6 ಆನಂದ ತೊರೆಯೊಳು ಮುಳುಗಿ ಚಿ-ದಾನಂದ ಗುರುವ ಕಾಣದೆ ಮನಮರುಗಿಧ್ಯಾನದಿ ಕಂಗಳು ತಿರುಗಿ ನೋಡಿತಾನೇ ತಾನಾದ ಘನದಿ ಮನ ಕರಗಿ7
--------------
ಚಿದಾನಂದ ಅವಧೂತರು
ನಿತ್ಯ ಶುದ್ಧನಾಪ ಲೋಕಂಗಳ ಮಾಡಿರುವ ಲೋಕಕೆ ತಾನೆ ಗುರುವಲೋಕವೇ ತಾನಾಗಿರುವ ಬಹುಲೋಕ ಲೋಕದ ಹೊರಗಿರುವ ದೇವನೇ 1 ದೃಶ್ಯವೇ ತಾನೆನಿಪ್ಪ ದೃಶ್ಯವ ನೋಡುತಲಿಪ್ಪದೃಶ್ಯಕೆ ಆನಂದಿಪ ಎಲ್ಲ ದೃಶ್ಯಕೆ ಆಧಾರವಿಪ್ಪನೇ 2 ಬೋಧನೆ ತಾನಾಗಿರ್ದ ಬೋಧಾಬೋಧದ ಸಿದ್ಧಬೋಧದಿ ತಾ ಬೆರೆದಿರ್ದಾ ಬರೆ-ಬೋಧಾ ಬೋಧಂಗಳ ಹೊದ್ದದ ದೇವನೇ 3 ನಾದದ ಮನೆಯಾಗಿಪ್ಪ ನಾದವ ಕೇಳುತಲಿಪ್ಪನಾದದಿಂ ನಲಿದಿಪ್ಪ ಮಹಾನಾದನಾದಕೆ ಬೆರೆದಿಪ್ಪ ದೇವನೇ 4 ನಿರುಪಮ ನಿರಾಲಂಬ ನಿರವಯ ನಿಶ್ಚಲಬಿಂಬಶರಣರೊಳು ಬಲಗೊಂಬ ವರಪರಮ ಗುರು ಚಿದಾನಂದ ದೇವನೇ 5
--------------
ಚಿದಾನಂದ ಅವಧೂತರು
ಪದಾಯುಗವ ನೀಡಿನ್ನಾ ಪಬುಧಾಮತಿಯನಿತ್ತು ಬದೀಗನಾಗಿಪ್ಪೆ ಅ.ಪಮುದಾದಿ ಮುಖದಲಿ ಉದಾಯಗೈಸಿದಿ 1ವಿದಾರಿತಾರಿಯೆ ಪದೂಮನಾಭನೆ 2ದಾತಾಗುರುಜಗನ್ನಾಥವಿಠಲ ನಿಜದೂತಾನೆನಿಪ ಎನ್ನ ಮಾತು ಲಾಲಿಸೊ ಸ್ವಾಮೀ 3
--------------
ಗುರುಜಗನ್ನಾಥದಾಸರು