ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದು ನಿಂತ ಖಳರ ಕೃತಾಂತಹೊದ್ದಿದವರ ಪೊರೆವ ಧವಳಗಂಗೆ ಹನುಮಂತಪ. ಕಪಟ ದಶಮುಖನ ಮದಭಂಜನ ಮಾಳ್ಪೆನೆಂದೆದ್ದು ನಿಂತಸಂಜೀವನವ ತಂದು ಕಪಿಗಳ ಕಾಯ್ದಆಂಜನೆಯ ತನಯ ತಾನೆದ್ದು ನಿಂತ 1 ಗುದ್ದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕಮರ್ದನ ಮಹಾಮಹಿಮನೆದ್ದು ನಿಂತಯುದ್ಧದಲಿ ರಘುಪತಿಯ ಹೊತ್ತು ಭಕುತಿಯ ತೋರ್ದಶುದ್ಧಸ್ವಭಾವ ತಾನೆದ್ದು ನಿಂತ2 ರಾಗಗಳ ಮೇಳೈಸಿ ಹಯವದನನೊಲಿಸಿಯೋಗಿಗಳನುದ್ಧರಿಸಲೆಂದೆದ್ದು ನಿಂತಈಗ ಧರೆಯೊಳು ಸುಜನರ ಮನೋಭೀಷ್ಟಗಳವೇಗದಲಿ ಕೊಡುವೆನೆಂದೆದ್ದು ನಿಂತ3
--------------
ವಾದಿರಾಜ
ಎಲೆ ದೇವಿ ಇಂತು ಚಿಂತೆಯು ಯಾಕ| ಸುಲಭದಿ ತಂದು ತೋರುವೆ ನಿನ್ನರಸನಾ ಪ ನಳಿನಗಳಲಿ ಅಪರಾಧವಾಯಿತೆಂದು| ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು| ಕಲಸಾರುವೇನೇ ನಿನ್ನಯ ತನುಗುಪವ| ತೊಲಗಿಬಿಟ್ಟು ನಿಲ್ಲುವನೇನೇ ರಂಗಾ1 ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು| ತ್ಯಜಿಸಿ ಬಂದ ತಪ್ಪಾಯಿತೆಂದು| ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ| ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ2 ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ| ಇನ್ನು ನಾ ಪೋಗಿ ನಾನಾ ಪರಿಯಿಂದಾ| ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ| ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೋಮಶೇಖರ ತಾನೆ ಬಲ್ಲ ಶ್ರೀ-ರಾಮನಾಮಾಮೃತ ಸವಿಯನೆಲ್ಲ ಪ ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ 1 ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ2 ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ 3 ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ4 ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ 5 ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ6 ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ7
--------------
ವ್ಯಾಸರಾಯರು