ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ದೇವ ಜಯ ದೇವ ಜಯ ಬ್ರಹ್ಮಾನಂದ ಜಯ ಜಯವೆಂದು ಬೆಳಗುವೆ ಬೆಳಗಿಲಿ ನಿಮ್ಮಿಂದ ಧ್ರುವ ಅರುವಿಗೆ ನಿಮ್ಮರುವುದೋರಿತು ಘನದರುವು ಅರುವೆ ಅರುವಾಗಿದೋರಿತು ಅರುವೆ ಘನ ಅರುಹು ತಿರುಹುಮುರವ್ಹಿನ ಕುರುವುದೋರಿತು ಘನದರುವು ಕುರುವ್ಹೆ ಕುರುವ್ಹಾಗಿದೋರಿತು ಘನ ಪರಾತ್ಪರವು 1 ಬೆಳಗಿನ ಘನ ಬೆಳಗು ಹೊಳೆವದು ಥಳಥಳವು ಹೇಳೇನಂದರೆ ಬಾರದು ತಿಳವ್ಹಿಗೆ ನಿಜಸುಳಹು ಕಳೆ ಮೊಳೆಗಳ ಉಳಹು ತುಳಕುತ ಘನದೊಲವು ಭಳಭಳ ಭಾಸುವ ನಿಮ್ಮ ಬೆಳಗೆ ನಿರ್ಮಳವು 2 ಅನುಭವದಾರತಿ ಸ್ವಾನುಭವದ ಪ್ರೀತಿ ಅನುದಿನ ಬೆಳಗುವದು ತಾ ಘನಗುರು ನಿಜಪ್ರೀತಿ ತಾನೆತಾನಾಗಿಹ ಙÁ್ಞನಸಾಗರ ಮೂರ್ತಿ ದೀನಮಹಿಪತಿ ಬೆಳಗುವೆ ಮನ ಮಂಗಳಾರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಹುಕಾಲಕೆ ಕಂಡೆ ಚೋದ್ಯವ ಇದು ಅಹುದಾದರಹುದೆನ್ನಿ ಇಲ್ಲವೆ ಛಿ ಎನ್ನಿ ಪ ಚಂಬು ಚರಿಗೆಯಂತೆ ತೆಗೆಯಿತು ತಾನೆತಾನಾಗಿ 1 ನಿತ್ಯ ಸಕಲತ್ತು ತಾನಾಗುತ ಜಾತಿಯ ನಡತೆಯನಡೆಸುವುದನು 2 ಸರ್ವತ್ರಸಮಗಾಣುತ ಮನೆಯೆಲ್ಲ ನೀರಾದುದು 3 ಕೊಳಗು ತಾನು ಒಲಿಸಿಕೊಂಡು ಮೇಳದಿ ಏಕೋ ಪಾತ್ರಗಳಿಂದ ಮೆರದುದ 4 ಜತನವು ಎಂದೆನ್ನಿಸಿಕೊಳ್ಳುತ ಲಕ್ಷ್ಮೀಪತಿಯಭೀಷೇಕಕ್ಕು ತಾನೆ ತಾನಾದುದ 5
--------------
ಕವಿ ಪರಮದೇವದಾಸರು
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಧ್ರುವ ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು