ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು | ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ ಕರುಣಾನಂದವ ಪಡೆದು | ತರಣೋಪಾಯವನರಿದು | ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು | ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು 1 ಭವ ಕಾನನವನೆ ತೊರೆವಾ | ನಿತ್ಯ ತಾನಾರೆಂಬುದು ನರಿವಾ | ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ | ಸಾನುರಾಗದಲಿಂದ ತಾನುಂಬ ಶರಣರು 2 ಹರಿಯಲ್ಲರೊಳಗರಿದು | ಶರೀರ ಭಾವನೆ ಮರೆದು | ಹರುಷದ ಗುಡಿಗಟ್ಟಿಬರುವ | ನಯನೋದಕದಿ | ಗುರುಮಹಿಪತಿಸ್ವಾಮಿ ಚರಣದ ಶರಣರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ತಾರಿಸಬೇಕೋ ಎನ್ನಾ|ಯಾದವ ರನ್ನಾ ಪ ತಾರಿಸಬೇಕೋ ಎನ್ನಾ | ಯಾದವ ರನ್ನಾ| ಸಾರಿದೆ ನಾನು ನಿನ್ನಾ|ಘೋರ ಭವಾಂಬುಧಿಯಾ| ಪಾರಗಾಣೆನೋ ಜೀಯಾ | ವಾರೆ ಕಂಗಳೆನ್ನಾ ನೋಡಿ| ದಯಮಾಡಿ ಒಡಮೂಡಿ ಅಭಯವ ನೀಡಿ1 ತಾನಾರೆಂಬುದು ನೋಡದೇ ತನುವಿನೊಳು| ನಾ ನನ್ನದೆಂದು ಪಾಡಿದೇ| ಶ್ರೀನಾಥ ನಿನ್ನ ನಾಮಾ|ನೆನೆಯದೆ ಮನದೊಳೊಮ್ಮಾ| ನಾನಾ ವಿಷಯದೊಳು ಬೆರೆದು|ಮೈಮುರಿದು| ಹಿತಜರಿದು ಕೆಡುವಾದೇನರಿದು 2 ಶರಣರಾ ಸಂಗದೋರಿಸಿ|ಸ್ವರೂಪವಾ| ಮರೆದ ವಿಭ್ರಮ ಹಾರಿಸೀ| ಗುರುಮೂರ್ತಿ ಪ್ರಭು|ಅರಹು ನೀಡೋ ಭಕ್ತಿಯಾ| ಸುರಸಾ ಸಾರಾಯದ|ಸುಖನುಂಬೆ|ಬಲಗೊಂಬೆ| ನಮೋಯೆಂಬೆ ಎನ್ನಿಂಬ ಬಿಂಬವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು