ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ತಾನಸÉ ತಾನಾದೆನ್ನ ಸ್ವಾಮಿ ಭಾನುಕೋಟಿ ಅಂತರ್ಯಾಮಿ ಧ್ರುವ ಕಾಣಬರುತಾದೆ ನೋಡಿ ಙÁ್ಞನವಂದಭ್ಯಾಸ ಮಾಡಿ ಭಾನು ಭವದಲಿ ಕೂಡಿ ನಾನು ನೀನೆಂಬುದೀಡ್ಯಾಡಿ 1 ತಿರುಗಿ ನೋಡು ದೋರುತಾನೆ ಅರುವಿನೊಳು ನಿಂತಾನೆ ಸಾರಸುಖ ಬೀರುತಾನೆ ಕೋರಿ ತಾರ್ಕಣ್ಯಾಗ್ಯಾನೆ 2 ಧ್ಯಾನ ಮೌನಾಗ್ಯಾನೆ ತಾನೆ ಜ್ಞಾನಗುರು ದೋರುತಾನೆ ದೀನ ಮಹಿಪತಿಗೆ ತಾನೆ ಖೂನ ಪರಿಪೂರ್ಣಾಗ್ಯಾನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾನಾನಂತಪರಾಧಿ ಎನ- ಗೇನಿಲ್ಲವು ದೃಢಬುದ್ಧಿಪ. ನೀನೇ ಗತಿ ನಿನ್ಹೊರತು ಕಾವರನು ಕಾಣೆನು ಕರುಣಾಂಬೋಧಿಅ.ಪ. ಹಂದಿಯಂತೆ ತಿಂದು ಬೆಳದೆ ಎನ್ನ ಮುಂದಣ ಗತಿಯನು ಮರೆತೆ ಹಿಂದಿಲ್ಲವು ಮುಂದಿಲ್ಲವು ಲೋಕದಿ ನಿಂದ್ಯಾಪಾತ್ರ ತಾನಾದೆ1 ಮುತ್ತಿತು ಯೆನಗಜ್ಞಾನ ಎನ್ನ ಚಿತ್ತದಿ ಕೊಡು ನಿನ್ನ ಧ್ಯಾನ ನಿತ್ಯ ತವಚರಣ ಭಕ್ತಿಜ್ಞಾನವ ನಿತ್ತು ಕಾಯೊ ಸುತ್ರಾಣ2 ಗತಿಯಾರಿಲ್ಲನ್ಯತ್ರ ಶ್ರೀ- ಪತಿಯೆ ಕಾಯೊ ಸುಚರಿತ್ರ ಕ್ರತುಪಾಲ ಲಕ್ಷ್ಮೀನಾರಾಯಣ ಭಾ- ರತಿಪತಿನುತ ಸುರಮಿತ್ರ3
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ 1 ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ 2 ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ 3 ಕರುಣಿಸಿ ನೋಡುತದೆ ಕರೆದರೋ ಎನುತದೆ ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ 4 ನೀಲವರ್ಣದೊಳದೆ ಥಳಥಳಗುಡುತದೆ ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ 5 ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ 6 ದಾಸ ಮಹಿಪತಿಯೊಳದೆ ವಾಸವಾಗ್ಯದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದು ಕೈಗೂಡಿ ಧ್ರುವ ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ 1 ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಡ ನೆಲೆಗೊಂಡಾಯಿತು ಧನ್ಯ 2 ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾನಾನಂತಪರಾಧಿ ಎನ-ಗೇನಿಲ್ಲವು ದೃಢಬುದ್ಧಿ ಪ.ನೀನೇಗತಿನಿನ್ಹೊರತು ಕಾವರನುಕಾಣೆನು ಕರುಣಾಂಬೋಧಿ ಅ.ಪ.ಹಂದಿಯಂತೆ ತಿಂದು ಬೆಳದೆ ಎನ್ನಮುಂದಣ ಗತಿಯನು ಮರೆತೆಹಿಂದಿಲ್ಲವು ಮುಂದಿಲ್ಲವು ಲೋಕದಿನಿಂದ್ಯಾಪಾತ್ರ ತಾನಾದೆ 1ಮುತ್ತಿತು ಯೆನಗಜ್ಞಾನ ಎನ್ನಚಿತ್ತದಿ ಕೊಡು ನಿನ್ನ ಧ್ಯಾನನಿತ್ಯತವಚರಣ ಭಕ್ತಿಜ್ಞಾನವನಿತ್ತು ಕಾಯೊಸುತ್ರಾಣ2ಗತಿಯಾರಿಲ್ಲನ್ಯತ್ರ ಶ್ರೀ-ಪತಿಯೆ ಕಾಯೊ ಸುಚರಿತ್ರಕ್ರತುಪಾಲ ಲಕ್ಷ್ಮೀನಾರಾಯಣ ಭಾ-ರತಿಪತಿನುತ ಸುರಮಿತ್ರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ