ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದರಿಬೇಕೀ ಆಟಾ ಘನಗುರು ಮಾಡಿದ ಮಾಟ ಅನುಮಾನಳಿಸಿದ ನೋಟ ಅನುಭವಕಾಯಿತು ನೀಟ ಧ್ರುವ ರಂಜಕ ಬಲುಕೊಂಡಿತು ನೋಡಿ ಅಂಜಿಕಿ ಭವಭಯ ಈಡ್ಯಾಡಿ ಪ್ರಾಂಜಲ ಸದ್ಗುರು ದಯಮಾಡಿ ಅಂಜನ ಹಚ್ಚಿದ ದುವುಡಿ 1 ಕಾಣದ ಕಂಡೆವು ಕಣ್ಣಿಲಿ ಖೂನಕ ಬಾರದು ಘನಲೀಲೆ ಜಾಣರು ಬಲ್ಲರು ಮನದಲಿ ನೆನದರು ತಾಂ ವರಿಕಿಲೆ 2 ಆಶ್ವರ್ಯವು ತಾನಾಗ್ಯದೆ ನಿಶ್ಚಯದೋರುತಲ್ಯದೆ ಪಶ್ಚಿಮಕೆ ಭಾಸುತದೆ ಸ್ವಚ್ಛವು ನೋಡಿದರದೆ 3 ರಚ್ಚಿಗೆ ತಾಂ ಬಾಹುದೆಲ್ಲ ಮುಚ್ಚಿಟ್ಟಡೆÉ ಬಾಳು ಸವಿಬೆಲ್ಲ ಅಚ್ಚಳಿಯದ ಭಕ್ತನೆ ಬಲ್ಲ ನೆಚ್ಚಿದ ಮಹಿಪತಿ ಸೊಲ್ಲ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ 1 ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ 2 ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ 3 ಕರುಣಿಸಿ ನೋಡುತದೆ ಕರೆದರೋ ಎನುತದೆ ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ 4 ನೀಲವರ್ಣದೊಳದೆ ಥಳಥಳಗುಡುತದೆ ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ 5 ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ 6 ದಾಸ ಮಹಿಪತಿಯೊಳದೆ ವಾಸವಾಗ್ಯದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಸ್ತ ಮಾಡಿಕೊಳ್ಳಬೇಕು ವಸ್ತು ತನ್ನೊಳಾಗದ ಹಸ್ತ ನೀಡಲಿಕ್ಕೆ ಸ್ವಾಮಿ ವಿಸ್ತರಿಸಿ ತೋರುತದೆ ಧ್ರುವ ಸಾವಧಾನವಾಗಲಿಕ್ಕೆ ಸಾಧಿಸಿ ಬರುತದೆ ಭಾವ ಬಲಿದು ನೋಡಲಿಕ್ಕೆ ಕಣ್ಣಮುಂದೆ ಭಾಸುತದೆ ನಿವಾತ ಕೂಡಲಿಕ್ಕೆ ತಾನೆ ತಾನಾಗ್ಯದೆ ಆವಾಗ ನೋಡಿ ನಿಜ ಠವಠವಿಸುತದೆ 1 ಆರೇರಿವೆರದು ನೋಡಿ ಗುರುವಾಕ್ಯ ಮಿರಬ್ಯಾಡಿ ಸಾರವೆ ಆದೆ ನೋಡಿ ಗುರುಸೇವೆ ಪೂರ್ಣಮಾಡಿ ದೂರ ಹೋಗಿ ನೋಡಬ್ಯಾಡಿ ತಿರುಗಿ ನಿಮ್ಮೊಳು ನೋಡಿ2 ಇದ್ದಲ್ಲೆ ಅದ ಪೂರ್ಣ ಸದ್ಗುರು ಕರುಣ ಬಿದ್ದಲ್ಲೆ ಬಿದ್ದು ಘನ ಸತ್ಯವಾದ ನಿಜಘನ ಬುದ್ಧಿವಂತರ ಮನ ಗೆದ್ದು ಅಯಿತುನ್ಮನ ಸಿದ್ಧರ ನಿಜಸ್ಥಾನ ಶುದ್ಧ ಮಹಿಪತಿ ಸುಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು