ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಹುಕಾಲಕೆ ಕಂಡೆ ಚೋದ್ಯವ ಇದು ಅಹುದಾದರಹುದೆನ್ನಿ ಇಲ್ಲವೆ ಛಿ ಎನ್ನಿ ಪ ಚಂಬು ಚರಿಗೆಯಂತೆ ತೆಗೆಯಿತು ತಾನೆತಾನಾಗಿ 1 ನಿತ್ಯ ಸಕಲತ್ತು ತಾನಾಗುತ ಜಾತಿಯ ನಡತೆಯನಡೆಸುವುದನು 2 ಸರ್ವತ್ರಸಮಗಾಣುತ ಮನೆಯೆಲ್ಲ ನೀರಾದುದು 3 ಕೊಳಗು ತಾನು ಒಲಿಸಿಕೊಂಡು ಮೇಳದಿ ಏಕೋ ಪಾತ್ರಗಳಿಂದ ಮೆರದುದ 4 ಜತನವು ಎಂದೆನ್ನಿಸಿಕೊಳ್ಳುತ ಲಕ್ಷ್ಮೀಪತಿಯಭೀಷೇಕಕ್ಕು ತಾನೆ ತಾನಾದುದ 5
--------------
ಕವಿ ಪರಮದೇವದಾಸರು
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ