ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣೆ ಲೋಕದೊಳಗೆ ಮುಖ್ಯ ಪ ಪ್ರಾಣೋಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ ಅ.ಪ. ವಾಸವ ಕುಲಿಶದಿ ಘಾತಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ ಮುಖ್ಯ1 ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಂಗೆಡೆ ಕಪಿಗಳ ಜಂಗುಳಿ ಪಾಲಿಸಿದೆ ಮುಖ್ಯ 2 ನೀಲ ಸು ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ ಜೀವನ ಜವದಿ ತಂದೆ ಮುಖ್ಯ 3 ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು ಕರಣ ನಿಯಾಮಕ ಸುರರಗುರುವೆ ನೀ ಕರುಣಿಸೆ ಕರುಣಿಸುವಾ 4 ಭೂತೇಂದ್ರಿಯದಧಿನಾಥ ನಿಯಾಮಕ ಆ ತೈಜಸಹರನಾ ತಾತನೆನಿಪ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದ ಮುಖ್ಯ 5
--------------
ಜಗನ್ನಾಥದಾಸರು
ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ ಚೆಲುವ ಕುದುರೆ ಕಂಡೀರ್ಯಾ ಮಧ್ವರಾಯರಿಗೊಲಿದ ಕುದುರೆ ವಾದಿರಾಜರ ಪೊರೆದ ಕುದುರೆ ಇಂದಿರಾ ದೇವಿಯನಪ್ಪಿದ ಕುದುರೆ ಬಂದರೆ ನರರು ಬೆದರದಂಥ ಕುದುರೆ 1 ಮಂದರಗಿರಿಯನ್ನೆತ್ತಿದ ಕುದುರೆ ಚಂದಿರನಂತೆ ಪೊಳೆಯುವ ಕುದುರೆ ಸೋದೆಯ ಪುರದೊಳಿರುವ ಕುದುರೆ ಮೋದದಿಂದ ಮೆರೆಯುವ ಕುದುರೆ 2 ನರನ ರಥವನು ಏರಿದ ಕುದುರೆ ಸ್ಮರನ ತಾತನೆನಿಪ ಕುದುರೆ ಸುರತರುವನೆ ಭೂಮಿಗೆ ತಂದ ಕುದುರೆ 3 ಕಡಲೆ ಹೂರಣ ಮೆಲುವ ಕುದುರೆ ಪಂಡರಪುರದಿ ಮೇದ ಕುದುರೆ ಪುಂಡರೀಕನಿಗೆ ಒಲಿದಿಹ ಕುದುರೆ ಪಾಂಡವರನೆ ಪೊರೆದ ಕುದುರೆ 4 ರಾಜನಾಥನೆನಿಪ ಕುದುರೆ ವಾಜಿವದನ ತಾನೆನಿಪ ಕುದುರೆ ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ ಕಂಜನಾಭನೆನಿಪ ಕುದುರೆ 5
--------------
ವಿಶ್ವೇಂದ್ರತೀರ್ಥ