ಒಟ್ಟು 35 ಕಡೆಗಳಲ್ಲಿ , 18 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಿ ಕಾಯಯ್ಯಾ ಭಜಕರ ಪ್ರಿಯಾ ಪ ಕಾಯ ಸುರಾವಳಿ ಸಾಹ್ಯನಿ ಶ್ರೀಕರ | ಗ್ರಾಹಿ ಪರಾತ್ಪರ ಪಾಹಿ ಮುಕುಂದಾ 1 ಅಂಬರವರ್ಣ ಚಿದಂಬರ ವಾಸ ಪೀ ತಾಂಬರಧರ ವಿಶ್ವಂಬರ ಕೃಷ್ಣಾ 2 ವಿಹಂಗ ತುರಂಗ ||ಭು|| ಜಂಗ ಶಯನ ಮಾತಂಗ ಸುವರದಾ 3 ಶ್ರೀಧರ ಭೂಧರ ರಿಪು ನಿಜ ಸೋದರ | ಶ್ರೀ ದಾಮೋದರ ದೇವಾ 4 ಅತ್ರಿವರದ ಲೋಕತ್ರಯ ಜಿತ | ಮಿತ್ರ ಸುತೇಜ ವಿಚಿತ್ರ ಚರಿತ್ರಾ 5 ಜಂಬುವಿಭೇದನ ಕುಂಭಜ ಶಂಭು ಸ್ವ ಯಂಭು ಮುಖಾರ್ಚಿತ ಕುಂಭಿನಿ ರಮಣಾ6 ಸುಂದರ ನಿಜಗುಣ ಮಂದಿರ ಕೇಶವ | ತಂದೆ ಮಹಿಪತಿ- ನಂದನ ಪ್ರಾಣಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಏ) ಸಂಪ್ರದಾಯದ ಹಾಡುಗಳು ಆರತಿ ಬೆಳಗುವೆ ನಿನಗೆ ಶ್ರೀರಾಮ ಸಾರಸಾಕ್ಷ ಹರಿ ಮೇಘಶ್ಯಾಮ ಪ ಪೀತಾಂಬರಧರ ತುಲಸೀಮಾಲ ಪಾತಕ ವಿದಳನ ಸೀತಾಲೋಲ 1 ಕುಂಡಲ ಮೃಗಮದತಿಲಕ ನಿರುಪಮ ಸುಂದರ ಮನ್ಮಥ ಜನಕ 2 ಭರತ ಶತ್ರುಘ್ನರ ಚಾಮರ ಸೇವ ಹರುಷದಿ ತೋರುವ ಪರಮಪ್ರಭಾವ 3 ಸೋದರ ಲಕ್ಷ್ಮಣ ಹನುಮ ಸಮೇತ ಮೋದದಿ ಮಾತೆಯರನು ಪೊರೆದಾತ 4 ಶುಕ ಮುನಿನುತ ಶುಭನಾಮ ಪತಿ ಪೂರ್ಣಸುಕಾಮ 5 ಶರಣಾಗತ ಪರಿಪಾಲಕ ಶೌರಿ ಕರುಣಾಕರ ಕಲಿವೈರಿ ಮುರಾರಿ 6 ಜಾಜೀಶ ಚನ್ನಕೇಶವ ಮೂರ್ತಿ ಅಗಣಿತ ಕೀರ್ತಿ 7
--------------
ಶಾಮಶರ್ಮರು
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ ಸುಕೃತ ಫಲದಿಂದ ಪ ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು ಹೇಯನಲ್ಲದೆ ನರಕದಲಿ ಬೀಳ್ವವನು1 ಕಂಡೆ ಶಂಖ ಚಕ್ರ ಪದುಮಧರನ ಕಿರೀಟ ಕುಂಡಲಧರನ ಪೀತಾಂಬರಧರನ 2 ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ ಧರನ ಕರುಣಾಪವರಧರನ ರಂಗನಾಯಕನ 3
--------------
ಬೇಲೂರು ವೈಕುಂಠದಾಸರು
ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಪ ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ1 ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕಾಲ ನಿಯಾಮಕ | ನಿತ್ಯ | ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ 2 ವಿಷಧರ ಭೂಷಣ ಕಸ್ತೂರಿ ತಿಲಕ ರಂ | ಪಶುಪತಿ ಪಿನಾಕಿ ಅಸುರಾರಾತಿ ವಿವೇಕಿ | ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ 3 ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ | ನೀಲ | ಗಾತುರ ಸದ್ಯೋಜಾತಾ ಜಾತರಹಿತಾ | ಶೂನ್ಯ ಪ್ರತಾಪಾ | ಶ ತಾಮಸ ಖ್ಯಾತಿ ಮಂಗಳಕೀರ್ತಿ 4 ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ | ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು | ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ | ಕಾಂತಾರ ನಿವಾಸಾ 5
--------------
ವಿಜಯದಾಸ
ಕರುಣಾಕರ ಪರಮೇಶ್ವರ ಗುರುತಮ ಕಲ್ಯಾಣಧಾಮ ಪ. ಸುರುಚಿರ ಪೀತಾಂಬರಧರ ನರಕೇಸರಿ ಕರಿವರವರದ ನಮೋ ನಮಃ ಅ.ಪ. ಮಂದರಧರ ಮಧುಸೂದನ ವೃಂದಾವನಸಂಚರಣ ಚಂದ್ರಕೋಟಿಸದೃಶಾನನ ವಂದನೀಯ ನಂದಕುಮಾರವ್ರಜೇಶ್ವರ 1 ಭುಜಗಶಯನ ಭೂತಭಾವನ ಭಜಕಜನೋದ್ಧರಣನಿಪುಣ ಕುಜನಜನಾರಣ್ಯದಹನ ವಾಹನ ಮೋಹನ2 ಮಾತರಿಶ್ವಸಖ ಲೋಕೈಕ ನಾಥ ಲಕ್ಷ್ಮೀನಾರಾಯಣ ವೀತಭಯ ವಿಧಾತ ರುಕ್ಮಿಣೀ- ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕರುಣಾಕರ ಪರಮೇಶ್ವರ ಗುರುತಮ ಕಲ್ಯಾಣಧಾಮ ಪ. ಸುರುಚಿರ ಪೀತಾಂಬರಧರ ನರಕೇಸರಿ ಕರಿವರವರದ ನಮೋ ನಮಃ ಅ.ಪ. ಮಂದರಧರ ಮಧುಸೂದನ ವೃಂದಾವನಸಂಚರಣ ಚಂದ್ರಕೋಟಿಸದೃಶಾನನ ವಂದನೀಯ ನಂದಕುಮಾರವ್ರಜೇಶ್ವರ 1 ಭುಜಗಶಯನ ಭೂತಭಾವನ ಭಜಕಜನೋದ್ಧರಣನಿಪುಣ ಕುಜನಜನಾರಣ್ಯದಹನ ವಾಹನ ಮೋಹನ 2 ಮಾತರಿಶ್ವಸಖ ಲೋಕೈಕ ನಾಥ ಲಕ್ಷ್ಮೀನಾರಾಯಣ ವೀತಭಯ ವಿಧಾತ ರುಕ್ಮಿಣೀ- ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೂಗೆಲೋ ಮನುಜ ಕೂಗೆಲೋ ಪ ಸಾಗರಶಯನನೆ ಜಗಕೆ ದೈವವೆಂದು ಅ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಮತ್ಸ್ಯ ಮೂರುತಿಯೆಂದು1 ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಕೂರ್ಮ ಮೂರುತಿಯೆಂದು2 ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು 3 ನಿಗಮವಂದಿತ ವಾರಿಜನಾಭ ಅನಿರುದ್ಧ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ನರಮೃಗ ರೂಪಾನೆಂದು 4 ವಟಪತ್ರಶಯನ ಜಗದಂತರ್ಯಾಮಿ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು5 ವಿಷ್ಣು ಸಂಕರುಷಣ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು 6 ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್Àನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋ ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು 7 ವಾಸುದೇವ ರಂಗ ನವನೀತ ಚೋರ ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು 8 ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಭಂಜನ ಕುಸುಮ ಶರನಯ್ಯ ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು 9 ಸರ್ವಮಂಗಳ ಸರ್ವಸಾರ ಭೋಕ್ತ ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು 10 ಪರಿ ಅಪಾರ ಜನ್ಮ ಬೆಂಬಿಡದಲೆ ಸಪ್ತ ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ 11
--------------
ವಿಜಯದಾಸ
ಗಜವÀದನ ಪಾಲಿಸೊಗಜವÀದನ ಪಾಲಿಸೊ ಪತ್ರಿಜಗದೊಡೆಯ ಶ್ರೀ ಭುಜಗಭೂಷಣಗಜವÀದನ ಪಾಲಿಸೊ ಅ ಪಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿಪಥವ ತೋರೊ ಶಕ್ತಿ ಸ್ವರೂಪನೇ 1 ವಾಸವ ಪೊಗಳುವೆಲೇಸಪಾಲಿಸೊ ನಿತ್ಯವಾಸವನುತ2 ಪೊಡವಿಯೊಳಗೆ ನಿನ್ನ ಬಿಡುವರ್ಯಾರೊ ಎನ್ನಕಡುಹರುಷದಿ ಕಾಯೋ ವಿಜಯ ವಿಠ್ಠಲದಾಸ 3
--------------
ವಿಜಯದಾಸ
ಜಗನುತೆ ಮಾಮಾತೆ ಪ್ರೀತೇ ಪ ತ್ರಿಜಗ ವಿಖ್ಯಾತೆ | ನಾಗಾಲಂಕೃತೆ ಮಾತೆ ವಿನೀತೆ ಅ.ಪ ಮಣಿ | ಸರಸಿಜ ಪಾಣಿ1 ಪೀತಾಂಬರಧರೆ ಪ್ರಣವಾಕಾರೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಜಯ ಜಯ ಜಯ ವಿಷ್ಣುಪಾದ ಜಯ ಶೇಷಗಿರಿಯಲ್ಲಿ ಮೆರೆವಂಥಾ ಪಾದ ಜಯ ಭಕ್ತಕೋಟಿ ಜೀವರ ಸಲಹುವ ಪಾದ ಸಿರಿ ಪಾದ 1 ಧ್ವಜ ವಜ್ರಾಂಕುಶ ಪದ್ಮ ಪಾದ ನಿಜದಿ ಸಲಹುವ ಗಂಗಾಜನಕನ ಪಾದ ಮದಗಜಗಮನನ ಪಾದ ಪಾದ 2 ಪೀತಾಂಬರಧರನ ಪಾದ ಪಾದ ಸೀತಾಪÀತೆ ದಿವ್ಯಹನುಮಾನುತ ಪಾದ ಪಾದ 3 ಹಾರ ಪದಕವಿಟ್ಟ ಪಾದ ತನ್ನ ನಾರಿ ಲಕುಮಿ ಸಹ ಮೆರೆವಂಥ ಪಾದ ಪಾರುಗಾಣಿಪ ದಿವ್ಯ ನೋಟದ ಪಾದ ಪಾದ ಭವವಾರುಧಿ ದಾಟಿಸುವ ದಿವ್ಯಪಾದ 4 ಮಕರ ಕುಂಡಲಧರನ ಪಾದ ತನ್ನ ಸಖ ಪಾಂಡವರಿಗೆ ಒಲಿದಂಥ ಪಾದ ಶಿಖೆಯೊಳು ಮಾಣಿಕ್ಯ ಕಿರೀಟನ ಪಾದ ಪಾದ 5 ಪಾದ ಪಾದ ಅಮೃತ ತಂದ ಪಾದ ಅಚ್ಚ ಭೂಮಿಯ ತಂದ ಪಾದ ಪಾದ 6 ಭೂಮಿಯನಳೆದಂಥ ಪಾದ ಭೂವ್ಯೋಮ ತ್ರಿವಿಕ್ರಮ ವಾಮನ ಪಾದ ಸ್ವಾಮಿ ಪರಶುಧರನ ಪಾದ ಪಾದ 7 ಗೋಕುಲನಂದನ ಪಾದ ಶ್ರೀಪತಿ ಬೌದ್ಧನ ಪಾದ ಪರಿ ನೆನಯಲಿ ಶ್ರೀಪ ಕಲ್ಕಿ ಪಾದ ಪಾದ 8 ಹತ್ತಾವತಾರ ಎತ್ತಿದ ಪಾದ ಭಕ್ತರನೆಲ್ಲಾ ಸಲಹುವ ಪಾದ ಮುಕ್ತಿದಾಯಕ ಕೃಷ್ಣನ ಪಾದ ಪಾದ 9 ಮೂರು ಹೆಜ್ಜೆ ಭೂಮಿ ಬೇಡಿದ ಪಾದ ತನ್ನ ಹಾರೈಸಿದ ಭಕ್ತರಿಗೋಸುಗ ಊರಿ ವೆಂಕಟಗಿರಿಯೊಳ್ ಮೆರೆವಂಥಾ ಭಕ್ತ ಪಾದ 10 ಪಾದ ಮಸ್ತಕದಿ ರಾರಾಜಿಸುವ ಕಿರೀಟನ ಪಾದ ಕಸ್ತೂರಿ ರಂಗನ ಪಾದ ಪಾದ 11
--------------
ಸರಸ್ವತಿ ಬಾಯಿ
ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ ದೀನೊದ್ದರ ಸಗಟಾಸುರದಮನಾ ಆನಂದ ಮೂರುತಿ ಫಣಿವರ ಶಯನಾ 1 ಕರುಣಾ ಕರಗಿರಿಧರ ಸರ್ವೇಶಾ ಶರಣಾಗತ ವತ್ಸಲ ಪಯೋನಿಧಿವಾಸಾ 2 ಕಂಬುಕಂದರ ಕಮಲಳಾಕ್ಷಾ ಅಂಬುಜ ಭವನುತಗೋಗೋರಕ್ಷಾ 3 ಶಂಬರ ಮಥನ ಜನಕ ಮಹಾ ಮಹಿಮಾ ಜಂಭಭೇದಿಸುತ ಸಖಘನ ಶಾಮಾ 4 ಪೀತಾಂಬರಧರ ಕೃಷ್ಣ ಶ್ರೀಧರಾ ಮಾತುಳನಾಶನ ಕೃತಭೂಧರಾ 5 ಗುರುಮಹಿಪತಿ ಸುತ ಜೀವನರಾಮಾ ಪರಮಾನಂದ ಕಾಯಕ ಗುಣಧಾಮಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಸಕಲಾಧಾರಾ | ಕೃಷ್ಣ ಜಯ ಜಯ ಭಕ್ತೋದ್ಧಾರಾ ಜಯಸಕಲಾಲಂಕಾರಾ | ಕೃಷ್ಣಾ ಯಮುನಾ ವೇಗ ಸಂಹಾರಾ ಜಯ ಜಯ ನಂದಕುಮಾರಾ ಕೃಷ್ಣ ಜಯ ಜೀಮೂತ ಶರೀರಾ ಪ ದೇವಕೀಕುಮಾರಾ ನಿಗಮಗೋಚರಾ ಶಂಖಚಕ್ರಧರ ವಸುದೇವಾನಂದಕರ ಸುರುಚಿರ ಪೀತಾಂಬರಧರ 1 ನಯನ ಮನೋಹರ ಗೋಪೀ ಮಂದಿರ ಸರಸಿಜ ದುರುಳ ಭಯಂಕರ ಶಕಟ ಬಕಾಂತಕ ಶೂರಾ ಕೃಷ್ಣ ಪೂತನಿ ಸಂಹಾರಾ ಅಜ ಸುರ ಮುನಿ ಪರಿವಾರ2 ಧೇನುಕ ದೈತ್ಯವಿದಾರಾ | ಕೃಷ್ಣ ಮರಕತ ಮಣಿಮಯ ಹಾರಾ ತರುಣೀ ಮಣಿಗಣನಿಕರಾ | ಕೃಷ್ಣ ಸರಸಿಜಲಸದಾಕಾರಾ ನವನೀತಕರಾ ಘನ ಮುರಳೀಧರ | ಕುಂಜವಿಹಾರಾ ವಿಷಧರ ಭಯಹರ ಗೋವರ್ಧನಧರ | ಮುಷ್ಟಿಕ ಮಧುರಾ 3 ವಿಹಾರಾ | ಕೃಷ್ಣ ನಾದಾನಂದ ಪ್ರಚಾರಾ ಅಕ್ರೂರಾನತ ಚರಣಾ | ಕೃಷ್ಣ ಮುನಿಜನ ಹೃದಯಾಭರಣ ಕುಬ್ಜಾವಂದಿತ ಚರಣ | ಕೃಷ್ಣ ಘನಮಹಿಮಾ ವಿಸ್ತರಣ ಗೋಪೀಜನಗಣ ಮೌಢ್ಯನಿವಾರಣ 4 ದುರುಳ ವಿದಾರಣ | ಭವಜನಕರುಣ ಹಲಧರ ಭುಜಬಲ ಪ್ರಾಣಾ ಕೃಷ್ಣ ಬೃಂದಾರಕಗಣ ಪ್ರಾಣ 5 ಶಿಶುಪಾಲೋತ್ಸವ ಬಾಣಾ | ಕೃಷ್ಣ ರುಕ್ಮ ಲೋಭ ಮದ ಯಾಣಾ ಅರಿಕುಲ ಸೈನ್ಯ ಕೃಪಾಣಾ | ಕೃಷ್ಣ ಚತುರೋಪಾಯ ಪ್ರವೀಣಾ ರುಕ್ಮಿಣೀರಮಣ ಶುಭಕರಕಂಕಣ ಪಾಂಡವಪೋಷಣ ಹರಣ ಚಕ್ರವಿಭೂಷಣ6 ದ್ರುಪದಸುತಾನತಚರಣಾ | ಕೃಷ್ಣ ಪರಮಾನಂದಾವರಣ ವಿದುರಾನತ ನೀಲಾಂಗ | ಕೃಷ್ಣ ಕರಧೃತವ್ಯರಥಾಂಗ ಕುರುಕುಲ ವನ ಸಾರಾಂಗಾ | ಕೃಷ್ಣ ಗೀತಾವನಜತರಂಗಾ ಕಮಲಾ ಅಂಗ | ಸತ್ವ ತುರಂಗಾ | ಧರ್ಮವಿಹಂಗಾ 7 ಮಾಂಗಿರಿ ರಂಗ ಸುಧಾಂಗಾ ಶುಭಾಂಗ | ಜಯ ಜಯ ಮಾಂಗಿರಿ ರಂಗಾ | ಕೃಷ್ಣ ಜಯ ಜಯ ಗರುಡ ತುರಂಗಾ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತುಳಸೀ ಸ್ತುತಿ ಮಾಧವ ಹೃದಯೆ ಪ ಪೀತಾಂಬರಧರ ಶ್ರೀಹರಿಜಾಯೆ ಅ.ಪ [ಸುಂದರ] ಮಣಿಮಯಸದನೆ ಪರಮಪಾವನೆ ಇಂದೀವರದಳ ಕೋಮಲನಯನೆ 1 ಪ್ರೇಮರಸಾನ್ವಿತೆ ಗುಣಭರಿತೇ ಶ್ರೀಮಾಂಗಿರಿವರ ರಂಗಮಹಿತೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಿನಮಣಿ ಕುಲಜಾತಾ ಪ್ರತಾಪ ಪ ಜನಕಸುತಾನ್ವಿತ ಮುನಿಕುಲಸನ್ನುತ ಶರಣಾಗತ ವರದಾತಾ ವಿನೀತಾ ಅ.ಪ ದುರುಳ ಖರಾರಿ | ಪಾವನ ಶೌರೀ | ದಶಕಂ ದರ ಮದಹಾರಿ | ಉದಾರೀ 1 ಜಗದಭಿರಾಮಾ ರಘುಕುಲ ಸೋಮಾ ಮರುತಾತ್ಮಜಮನಧಾಮ ಸುನಾಮ2 ಮಾಂಗಿರಿಮಂದಿರ ದೀನ ಕೃಪಾಕರ ಪೀತಾಂಬರಧರ ಮಾರಶರೀರಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವದೇವತೆಗಳ ಸ್ತುತಿ ಅಂಬುಧಿಶಯನ ಪೀತಾಂಬರಧರ ಕಮಳಾಂಬಕ ಸಿರಿರಮಣ ನಂಬಿದ ಭಕ್ತರ ಬೆಂಬಿಡದಿಹನೆಂಬುದಕೆ ಸಹಜಗುಣ ಪ ಒರಲುತ್ತಾ ಸಭೆಗೆ ಬರಲು ಒತ್ತಿ ಮುದ್ದಿಸುತಿರಲು ಪೊರೆದೆಯೋ ಧ್ರುವನ1 ಹರಿನಾಮವನು ಬರೆಯೆ ವಿರಚಿಸೆ ಕೇಳದಿರೆ ದುರುಳಬಾಧಿಸೆ ಮಗನ ಮೂರ್ತಿ ವರವಿತ್ತು ಪೊರೆದೆಯೋ ಪ್ರಹ್ಲಾದನ 2 ಶಾಪವನೀಯ ಲಗಸ್ತ್ಯನಿಂದ್ರದ್ಯುಮ್ನ ಭೂಪತಿ ಗಜವಾಗಲು ಕೋಪದಿ ನೆಗಲ್ವಿಡಿಯೊ ಗುಪಿತದಿ ಮೊರೆಯಿಡಲು ಸೀಳ್ದು ಪೊರೆದೆಯೋ ಗಜವ 3 ಮರ್ಮವನರಿತು ಬರಲು ಅನ್ನವನೀಯೆನಲು ಪೊರೆದೆಯೋ ಪಾಂಡುವರ 4 ಹರಿವಾಸವರವ ಮಾಡಲು ನರಿಯೆ ಬಂದು ವರವಿತ್ತು ಪೊರೆದೆಯೋ ವೇಣುಗೋಪಾಲ 5
--------------
ಕವಿ ಪರಮದೇವದಾಸರು