ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ತಾಂದೋಣಿ ವೆಂಕಟರಮಣ ಇಂದು ವೆಂಕಟನ ಕಂಡು ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ ಅಮರಾವತಿ ಸರಿತತೀರ ಗಿರಿಯಲಿ ನಿಂತ ಪ್ರೇಮದಿಂದಲಿ ಭಜಿಸೆ ಅಭಯ ವರವೀವ 1 ಎನ್ನ ಕುಲದೇವನು ತಿರುಪತಿ ವೆಂಕಟನು ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ ಅನುಗಾಲ ರಕ್ಷಿಸುವ ಅನಿಮಿತ್ತಬಂಧು 2 ಮಧ್ವಮುನಿ ಹೃತ್ಸದನ ದೇವದೇವೋತ್ತಮನು ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ 3
--------------
ಪ್ರಸನ್ನ ಶ್ರೀನಿವಾಸದಾಸರು