ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು
ಶೇಷದೇವ ವಾರುಣೀಪತಿ ಪಾಹಿ ಪ ಶೇಷದೇವ ತ್ರೈಘೋಷಣ ಮುಖ ಪರಿ ಪೋಷಿಸು ಎಮ್ಮಭಿಲಾಷೆಯ ಸಲಿಸಿ ಅ.ಪ. ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ 1 ಪುಣ್ಯ ಚರಿತ ಸುಶರಣ್ಯಗೆ ಸುಬ್ರ ಹ್ಮಣ್ಯದೇವ ಕಾರುಣ್ಯ ಮೂರುತಿ 2 ವಾರುಣಿ ಸುಮುಖ ಸರೋರುಹ ದಿನಕರ ತೋರು ತವಾಂಘ್ರಿ ಮಹೋರಗ ರಾಜ3 ಅಸಿತವಸನ ಹಲಮುಸಲಾಯುಧ ಧರ ದ್ವಿಸ [ಹ] ಸ್ರೇಕ್ಷಣ ಸುಶರಣ ಪಾಲ 4 ಪಾತಾಳಪ ಪುರುಹೂತನುತ ಜಗ ನ್ನಾಥ ವಿಠಲನ ಪ್ರೀತಿ ವಿಷಯನೆ 5
--------------
ಜಗನ್ನಾಥದಾಸರು
ಕೆಡಗೊಡದಿರು ಎನ್ನ ಚಿತ್ತಗತಿಯ ಸುರರೊಡೆಯ ತವಾಂಘ್ರಿ ಹೊಂದಿದ ಮತಿಯ ಪ.ಒಂದು ಗುರಿಗಿಟ್ಟರೆ ತಪ್ಪುತಿದೆ ಮತ್ತೊಂದಕಿಡದೆ ತಾ ತಗಲುತಿದೆಹೊಂದಲೊಲ್ಲದು ತ್ವನಿಷ್ಠೆಯನು ಒಣದಂದುಗಗೊಳುತಿದೆಹರಿನೀನು1ಮುಂದಿಟ್ಟ ಷಡ್ರಸಾನ್ನವನುಣ್ಣದು ದೂರಿಂದ ನಿಸ್ಸಾರಕ್ಹೆಣಗುವುದುನಂದಿಸಲೊಲ್ಲದು ನೆಳಲ್ವಿಡಿದು ಕಿಚ್ಚೆಂದಂಜದೋಡಿ ಧುಮುಕುತದಿದು 2ಪ್ರದೇಶ ಅಂಗುಟ ಮಾತ್ರವ ಕಾಣದೆ ತಾಭೂದಿವಿ ಪಾತಾಳಕೈದುತಿದೆಮಾಧವಪ್ರಸನ್ನವೆಂಕಟ ದಯಾಳು ನಿನ್ನಪಾದದಲ್ಲಿಡು ಇದರುಲುಹು ಬಲು 3
--------------
ಪ್ರಸನ್ನವೆಂಕಟದಾಸರು
ಬಂಟನಿಂದ ವ್ಯಾಳೆ ವ್ಯಾಳೆಗೆ ಊಳಿಗವ ಕೊಂಡುಉಂಟುಮಾಡುನಿನ್ನ ದಯವನಂಟನಾಗಿ ನೀಯೆನ್ನ ಅವಸರಕೆ ಒದಗು ವೈಕುಂಠಪತಿ ವೆಂಕಟೇಶ ಶ್ರೀಶ ಪ.ನೀನಟ್ಟಿದಲ್ಲಿಗೈದುವೆ ಕರೆದರೋಡಿ ಬಹೆನೀನುಂಡುಳಿದುದನುಣುವೆನೀನಾರಧೀನ ಮಾಳ್ಪೆ ಅವರಾಜÕದಲಿ ನಡೆವೆನೀನುಟ್ಟ ಮೈಲಿಗ್ಯುಡುವೆ ತೊಡುವೆ 1ಕ್ರೂರಕಂಟಕ ಕುಲವ ನಿನ್ನ ನಾಮಾಸ್ತ್ರದಿ ವಿದಾರಿಸುವೆ ಹುಯ್ಯಲಿಡುವೆಆರಿಗಂಜೆನು ಯಮನ ಚಾರಕರಿಗಂಜೆ ನಾಮಾರುವೆ ತವಾಂಘ್ರಿಗುರವ ಶಿರವ 2ಇಂತೆ ಸೇವೆಯ ಕೊಂಡು ಎನ್ನ ತನುಮನದಲ್ಲಿಸಂತತವಸರಕೊದಗಯ್ಯಚಿಂತನೆಯವಸರ ಅಂತ್ಯಯಾತ್ರೆಯವಸರಕೊದಗುಕಾಂತ ಪ್ರಸನ್ವೆಂಕಟಗಪ್ಪ ಎನ್ನಪ್ಪ 3
--------------
ಪ್ರಸನ್ನವೆಂಕಟದಾಸರು
ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ ಹರೆದೀನನಾಥ ನೀ ಎನ್ನ ಪಾಲಿಸೊ ಪ್ರಾಣಪತಿಬಿಡದೆ ದೇವ ಪ.ಭೂರಿದುರಿತವು ಬೆನ್ನಬಿಡದಿರಲಾರಿಗುಸುರುವೆನೊಘೋರಭವಬವಣೆಯ ಅನುಭವವಾರಿಗೊಪ್ಪಿಪೆನೊಮೀರಿ ದಹಿಸುವ ಮೂರುತಾಪದದಾರುಕ್ಕುರೇನೊಸಾರಸೇವಕಮಾನಿ ನರಹರಿ ಸಾರಿದೆನೊ ನಿನ್ನ ದೇವ 1ಪೋಕಮನುಜರ ಅನುಸರಣಿಗಳಿಂದಾಕಾನನಗೆಲುವುಸಾಕು ಸಾಕಲ್ಪರ ಸಖತ್ವವು ಸೇವೆಗತ ಸುಖವುಯಾಕಿನಿತು ಕ್ಲೇಶವು ನನಗೆ ನೀ ಸಾಕು ನೂಕುಳುಹುಶ್ರೀ ಕಮಲಲೋಚನ ಕರುಣಿ ನಿನ್ನ ಬೇಕು ಊಳಿಗವು ದೇವ 2ನೀಚ ಸಂಗವನೊಲ್ಲೆ ಬಲುದುರ್ವಾಚ್ಯದಲಿ ನೊಂದೆನಾಚಿಕಿಲ್ಲದೆ ವಿಷಯದಲಿ ಸಂಕೋಚ ನಡೆ ತಂದೆಸೂಚಿಸಿನ್ನಾದರೆ ತವಾಂಘ್ರಿ ಗುಣಾಚರಣೆಯಿಂದಯಾಚಕರೊಡೆಯ ಪ್ರಸನ್ವೆಂಕಟಗೋಚರನೆ ತಂದೆ ದೇವ 3
--------------
ಪ್ರಸನ್ನವೆಂಕಟದಾಸರು