ಆನಂದ ಗಂಭೀರ ನೀಲಾಂಗ ರಂಗ
ಭಂಜನ ಹರೇ ಹರೇ ಪ
ಮುನಿಜನ ವಂದಿತ | ವನರುಹ ಲೋಚನ
ಘನ ನೀಲಾಂಬುದಸಮಾ ಹರೇ ಅ.ಪ
ವನಜನಯನ ಹರಿಕೇಶವ ಮಾಧವ
ಕನಕಾಂಬರಧರ ಗೋಪಾಲ
ದನುಜ ಕುಲಾಂತಕ ಧೇನುಕ ಸಂಹಾರ
ಅನಂತ ಶ್ರೀಧವ ಶ್ರೀಬಾಲಾ 1
ಭುವನಮನೋಹರ ಮುರಳೀಧೃತಕರ
ಭವಸಾಗರದೂರ ನಮೋ ನಮೋ
ಪವನಾತ್ಮಜಕರ ಮಾಂಗಿರಿನಾಯಕ
ತವಸೇವಿತಪದ ನಮೋ ನಮೋ 2