ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನಾರು ನಾನಾರು ನೀನೆನ್ನೊಳಿರಲು ನಾನಾರು ನೀನಾರು ನಾನಿನ್ನೊಳಿರಲು ಪ ನೀನೇನ ಮಾಡಿಸುವೆ ನಾನದನು ಮಾಡುವೆ ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ ನನ್ನದೇನುಂಟಯ್ಯ ಪನ್ನಗಾಧೀಶಾ ನಿನ್ನವನು ನಾನಯ್ಯ ನನ್ನವನು ನೀನಾದೊ ಡಿನ್ನೇನು ನಾನೀನು ಎನ್ನುವಂತಿಲ್ಲ 1 ಇಂದಿರಾನಂದ ಗೋವಿಂದ ತವಪಾದಾರ ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ ಮುಂದೆನಗೆ ಜನ್ಮಂಗಳೊಂದಾದರೂ ಬೇಡ ತಂದೆ ಮಾಂಗಿರಿರಂಗ ಬಂದುಕಾಯೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಮತ್ ತಂದೆವರದಗೋಪಾಲದಾಸ ರಾಯಾವೃಂದದಿಂದಲಿ ನಿಮಗೊಂದಿಸುವೆನೋ ಜೀಯಾ ಪ. ಇಂದಿನವರೆಗೆ ನಾನಿಂದ್ಯ ಜನರೊಳು ಕೂಡಿನಿಂದ್ಯ ಮಾಡುತ ಪರರ ಡಂಭತನದಲಿ ಮೆರೆದೆನೊಕಂದನಾ ಕುಂದುಗಳ ಒಂದನೆಣಿಸದೆ ಗುರುವೇಮಂದಜನ ರಾಶಿಯೊಳು ಬೆಂದುಹೋಗುವುದನು ಕಂಡುಅಂದದಲಿ ನೀ ಹಿಡಿದೆಳೆತಂದೂ 1 ಮುಂದೆ ಪೇಳುವೆ ಕೇಳೋಚಂದ್ರಮೌಳಿಯೆ ನಿನ್ನ ಪ್ರೀತಿಪಾತ್ರನಾದಸುಂದರಾಂಗನ ಮುಖದೀ ನೀನಿಂದು ಅಘವೃಂದಗಳ ಹೊಡೆದೋಡಿಸೀಮಿಂಚಿನಿಂದಕ್ಷ ರ, ಯ, ಮ ಎಂಬಕ್ಷರಗಳ ಕಲ್ಪಿಸಿಎಂದಿಗೂ ಮರೆಯದಂಥ ತಂದೆವರದವಿಠಲನೆಂಬಅಂಕಿತದಿಂದ ಬಂಧನವ ಮಾಡಿ ಭಾವ ಸಂವತ್ಸರಫಾಲ್ಗುಣ ಶುದ್ಧ ತ್ರಯೋದಶಿಚಂದ್ರವಾರ ಅರುಣೋದಯ ಕಾಲದೀಕಡೆಕೋಳ ಶ್ರೀ ವೆಂಕಟೇಶನ ಸನ್ನಿಧಾನದಿಅನುಗ್ರಹಿಸಿದೆಯೋ ಮಹಾರಾಯಾಮಂದಮತಿ ನಾ ನಿಮ್ಮ ಮಹಿಮೆಯನು ಪೇಳಲೆನ್ನಳವೆತವಪಾದಾರವಿಂದದಿ ಅನವರದ ಜ್ಞಾನ ಭಕುತಿವೈರಾಗ್ಯವನಿತ್ತು ರಕ್ಷಿಸಬೇಕೋತಂದೆವರದವಿಠಲದೂತಾ ಮನೋ ನಿಯಾಮಕ ದೊರೆಯೇ
--------------
ಸಿರಿಗುರುತಂದೆವರದವಿಠಲರು