ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಢರಿನಾಥ ವಿಠಲ | ತೊಂಡನನು ಸಲಹೊ ಪ ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ. ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ 1 ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ 2 ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ 3 ಹರಿಗುರೂ ಸದ್ಭಕ್ತಿ | ಪರತತ್ವ ಸುಜ್ಞಾನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ 4 ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ5
--------------
ಗುರುಗೋವಿಂದವಿಠಲರು
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ. ವೇದವಿದಿತೇ ತವಪಾದವ ಸ್ಮರಿಸುವ ಕರವ ಅ.ಪ. ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ ಕಾಮಜನನೀ ನಿನ್ನ ನಾಮ ಮಂತ್ರಗಳನ್ನು ನೇಮನಿಷ್ಠೆಯೋಳ್ ಜಪಿಸುವಂದದಿ ಸು ಪ್ರೇಮದಿಂದಲಿ ವಿಮಲಮತಿಕೊಡು 1 ಜಾನಕಿನಾಮವ ಧರಿಸಿ ದಾನವಕುಲವೆಂಬ ಕಾನನಂಗಳಿಗಂತು ಹವ್ಯ ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ 2 ಶಮದಮಾದಿಗಳಿಂದ ಮೆರೆಯುತಲಿರ್ಪ ಕ್ಷಮೆಗೆ ನೀ ನೆಲೆಯೆಂದು ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ 3
--------------
ನಂಜನಗೂಡು ತಿರುಮಲಾಂಬಾ
ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ ಸತ್ಯಾತ್ಮ ಸರ್ವೋತ್ತಮ ಪ ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ ಶೌರಿ ಅ.ಪ ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ ರಾಬ್ಧಿ ಕನ್ನಿಕಾರಮಣ ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ ನುದ್ಧರಿಸು ದಯಭೂಷಣ ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ ಶುದ್ಧನೆಂದೆನಿಸೆನ್ನ ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು ಶುದ್ಧಚೈತನ್ಯರೂಪ ಭೂಪ 1 ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ ಕೃಪೆಮಾಡು ಭಕ್ತಲೋಲ ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು ಅಪರಿಮಿತ ಮಹಿಮ ಜಾಲ ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು ಸ್ಥಾಪಿಸೈ ಭಜಕಜನಪಾಲ ಕಪಿವರದ ವನಮಾಲ ಕಪಟಗಳಕುಲಕಾಲ ಕೃಪಾದೃಷ್ಟಿನೀಡೆನ್ನೊಳು ಕೇಳು 2 ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ ಮುಟ್ಟಿಭಜಿಪೆ ತವಪಾದವ ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ ಕೆಟ್ಟ ಬವಣೆ ಕಳಿಯಭವ ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ ಕಟ್ಟುಮಾಡು ಹೇ ಮಾಧವ ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3
--------------
ರಾಮದಾಸರು
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಪ ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆಅ ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ 1 ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ 2 ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ 3 ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ4 ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ5 ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ6 ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ 7 ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ8 ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ 9
--------------
ಕನಕದಾಸ