ನೀ ಕೈಯ ಬಿಡಬೇಡವೋ ನರಹರಿ ಪ
ನೀ ಕೈಯ ಬಿಡಬೇಡ ನಾಕೆಟ್ಟರೂ ಬೇಡ
ನೀ ಕೊಟ್ಟ ಫಲವಿನ್ನು ಸಾಕೋ ಮಾಂಗಿರಿರಂಗ ಅ.ಪ
ನನ್ನ ಕಾಯುವ ಭಾಗ ನಿನ್ನದಾಗಿರಲಯ್ಯ
ಇನ್ನಾವುದನು ಕೇಳ್ವುದೆನ್ನ ಭಾವದೊಳಿಲ್ಲ
ಸನ್ನುತಾಂಗ ಕೃಷ್ಣ ಪನ್ನಗಶಯನ
[ಉನ್ನತದಿ ಸದಾ ಭಜಿಸುವೆನು ನಿನ್ನ] 1
ಆಡುವಾ ನುಡಿಗಳು ನೋಡುವಾ ನೋಟವು
ಮಾಡುವ ಕಾರ್ಯವು ನಿನ್ನದಾಗಿರಲು
ಮೂಡಿಸು ಮನದಲ್ಲಿ ತವಪಾದಭಕ್ತಿಯ
ಜೋಡಿಸಿ ಕೈಗಳ ಮುಗಿವೆನೋ ರಂಗ 2