ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಆವರೀತಿಲಿ ಎನ್ನ ಕಾವದೇವರು ನೀನಿ ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ ಜೀವದರಸನೆ ಭಾವಜಪಿತ ನಿನ್ನ ಬಿಟ್ಟ ನ್ನ್ಯಾವ ದೇವರು ಇಲ್ಲ ಎನಗೆ ಅ.ಪ ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ ಹಸನಾಗಿ ಭಜಿಪಂಥ ಕುಶಲಮತಿ ನೀಡಿ ಪುಸಿಯ ಸಂಸಾರದ್ವೆಸನವಳುಕಿಸಿ ಅಸಮ ಸಂತಸಸುಖವ ಕರುಣಿಸಿ ಅಸುವುಪೋದರು ಪುಸಿಯನಾಡದ ಸುಶೀಲ ಮನವಿತ್ತು ಪೋಷಿಸಭವ 1 ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ ಗಡನೆ ಸ್ಥಿರಮಾಡಿ ಎಡರು ತೊಡರಿನ ಜಡರಿನೊಳಗಿಂದ ಕಡೆಗೆ ನಿಲ್ಲಿಸಿ ಒಡೆಯ ನಿನ್ನ ಅಡಿದೃಢವನಿತ್ತು ಪಿಡಿದು ನೀ ಎನ್ನ ಬಿಡದೆ ಸಲಹೊ 2 ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು ಸತತ ನಿನ್ನನು ಸ್ತುತಿಪ ಭಕ್ತರ ಹಿತದ ದರುಶನ ಪ್ರಥಮವಿತ್ತೆನ್ನ ಗತಿಸದಂಥ ನಿಜಸ್ಥಿತಿಯ ಸಂಪದ ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ 3
--------------
ರಾಮದಾಸರು
ಖರೆ ತವಧ್ಯಾನ ಹರಿ ಬೇಗ ಮಾಡೆನ್ನಗೆ ನಿಜಮನನ ಪ ಬಾಗಿವಂದಿಪೆ ನಾ ನಿಮ್ಮ ಚರಣ ಭವ ರೋಗ ದಯದಿ ಮಾಡು ನಿವಾರಣ ಅ.ಪ ಜಾಗರಮಾಡಿದರಹುದೇನು ನಿತ್ಯ ಭಾಗವತನೋದಿದರಹುದೇನು ಯಾಗಮಾಡಿದರಹುದೇನು ಮಹ ಯೋಗ ಬಲಿಸಿದರಹುದೇನು ಸೋಗು ಹಾಕಿ ಬೈರಾಗಿ ಆಗಿ ಇಳೆಯ ಭೋಗವ ತ್ಯಜಿಸಿದರಹುದೇನು 1 ಸ್ನಾನಮಾಡಿದರಹುದೇನು ಬಹು ದಾನಮಾಡಿದರಹುದೇನು ಮೌನಮಾಡಿದರಹುದೇನು ಕೌ ಪೀಣ ಧರಿಸಿದರಹುದೇನು ಜ್ಞಾನ ಬೋಧಿಸುತ ನಾನಾದೇಶಗಳ ಮಾಣದೆ ತಿರಿಗಿದರಹುದೇನು 2 ಜಪವಮಾಡಿದರಹುದೇನು ಬಲು ಗುಪಿತ ತೋರಿದರಹುದೇನು ತಪವ ಗೈದರಹುದೇನು ಮಹ ವಿಪಿನ ಸೇರಿದರೆ ಅಹುದೇನು ಚಪಲತನದಿ ಸದಾ ಅಪರೋಕ್ಷನುಡಿದು ನಿಪುಣನೆನಿಸಿದರೆ ಅಹುದೇನು 3 ಸಾಧುವೆನಿಸಿದರೆ ಅಹುದೇನು ಚತು ಸ್ಸಾಧನಮಾಡಿದರಹುದೇನು ವೇದ ಪಠಿಸಿದರೆ ಅಹುದೇನು ಅಣಿ ಮಾದಿ ಅಷ್ಟಸಿದ್ಧಿ ಅಹುದೇನು ಓದಿತತ್ತ್ವಪದ ಛೇದಿಸಿ ಬಿಡದೆ ಬೋಧಕನೆನಿಸಿದರೆ ಅಹುದೇನು 4 ಕೋಶನೋಡಿದರೆ ಅಹುದೇನು ಬಹು ದೇಶ ನೋಡಿದರೆ ಅಹುದೇನು ಆಸನಹಾಕಿದರಹುದೇನು ಮಂತ್ರ ಅ ಭ್ಯಾಸ ಮಾಡಿದರೆ ಅಹುದೇನು ದಾಸಪ್ರಿಯ ಭಯನಾಶ ಶ್ರೀರಾಮ ನಿಮ್ಮ ಧ್ಯಾಸವೊಂದಿರೆ ಮುಕ್ತಿ ಸಿಗದೇನು 5
--------------
ರಾಮದಾಸರು
ದಯಪಾಲಿಸೆಲೊ ರಂಗ ಭ್ರಮಿಪ ಮನಕೆ ಶಾಂತಿ ಪ ತನುಮನಧನಮೋಹವನು ಪರಿಹರ ಮಾಡಿ ಅನುದಿನ ತವಧ್ಯಾನ ಆನಂದ ಕರುಣಿಸೊ 1 ಸ್ಮರಿಸಬಾರದ ಸ್ಮರಿಸಿ ದುರಿತಕ್ಕೆ ಗುರಿಯಾಗಿ ಪರಿಪರಿ ಮರುಗುವ ದುರ್ಮನ ದೂರಮಾಡೊ 2 ನೀನೆ ಎನ್ನಯ ಮಹಪ್ರಾಣೇಶ ಶ್ರೀರಾಮ ನಾನಾಕಾಮಿತ ಬಿಡಿಸಿ ಜ್ಞಾನಪದವಿ ನೀಡೊ 3
--------------
ರಾಮದಾಸರು
ಶೌರಿ ಸುರಸೇವ್ಯ ಸುಜನಾತ್ಮ ಸತ್ಯ ಆನಂದ ತವಸೇವೆ ನೀಡೆನಗೆ ಪ ಕೊಡು ಎನ್ನ ಕರ್ಣಕ್ಕೆ ದೃಢಮಾಡು ವಚಶ್ರವಣ ಬಿಡದೆನ್ನ ನಯನಕ್ಕೆ ಇಡು ನಿನ್ನ ದರ್ಶನವ ನುಡಿಸೆನ್ನ ವದನದಿಂ ಕಡು ಸತ್ಯವಚನವನು ಎಡಬಿಡದೆ ಜಿಹ್ವೆಕ್ಕೆ ನೀಡು ತವಧ್ಯಾನ 1 ಒದಗಿಸೈ ಕೈಗೆ ತವಪಾದಪದುಮ ಸೇವಾ ಹೃದಯಕ್ಕೆ ಕರುಣಿಸು ಸದಮಲ ಸುಶಾಂತಿ ಸದಯಾತ್ರ ನೀಡೆನ್ನ ಪಾದಕ್ಕೆ ಪುಣ್ಯಸ್ಥಳ ವಿಧವಿಧದಿ ಬೇಡ್ವೆ ನೀನು ದಯನಾಗೆನ್ನೊಳಗೆ 2 ಚಿತ್ತಕ್ಕೆ ಸ್ಥಿರನೀಡು ಸ್ವಸ್ಥತೆ ಕೊಡು ಮನಕೆ ಸತ್ಯರಿಗೆ ಮಣಿಸೆನ್ನ ಮಸ್ತಕವ ಸತತ ನಿತ್ಯ ಪರಿಪೂರ್ಣ ಮಮ ಕರ್ತ ಶ್ರೀರಾಮ ನಿನ್ನ ಭಕ್ತನೆಂದೆನಿಸೆನ್ನ ಮುಕ್ತಿ ಪಥಕ್ಹಚ್ಚು 3
--------------
ರಾಮದಾಸರು