ಜಂಜಾಟ ತೊಲಗಿಸೈ ದುಷ್ಟಸಂಸಾರದ ಪ
ಜಂಜಾಟ ತೊಲಗಿಸೈ
ಕಂಜನಾಭನೆ ಕರಿರಾಜವರದ ಹರಿ ಅ.ಪ
ಚಲಿಸುವ ಎನ್ನ ಮನದ್ಹಲುಬಾಟ ಕಡೆಹಾಯ್ಸಿ
ನಿಲಿಸು ತವಚರಣದಿ ಚಲಿಸದಂತನುದಿನ 1
ಐಹಿಕಸುಖ ಮೋಹಿಸಿ ಬಹುಭ್ರಾಂತಿಯಿಂ ಬಳಲು
ತಿಹ್ಯ ಎನ್ನ ಚಿತ್ತಕ್ಕೆ ಸಹನಶೀಲತೆ ನೀಡಿ2
ನೀನೆಗತಿ ಎನಗಿನ್ನು ನಾನಾದೈವನರಿಯೆ
ಜ್ಞಾನದಿಂ ಪಾಲಿಸೆನ್ನ ಪ್ರಾಣಪತಿ ಶ್ರೀರಾಮ 3