ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಕಿತ ರಹಿತ ಹಾಡುಗಳು ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು 1 ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ 2 ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು 3 ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು4 ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ 5 ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ಮøತ್ತಿಕೆಯತಳೆವುದು ಬಲ್ಲ ಸುಜನರು 6 ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ 7 ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು 8 ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ9
--------------
ಕೆಳದಿ ವೆಂಕಣ್ಣ ಕವಿ
ಇಂದಿರಾರಾಧ್ಯನೆ ಬಂದು ನಿಲ್ಲೊ ಪ ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ- ನೆಂದು ಕರೆಯಲೋ ಗೊವಿಂದ ಅ.ಪ ಜಲದೊಳಾಡುವ-ಕಲ್ಲಹೊರುವ ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ ವನಳಿವಗೋವನೆ ಕಾಯ್ದ ಮರೆವ ನಿನ್ನಯ ರೂಪವಾ ಸಲಿಲ ಹೊಕ್ಕು ಅಸುರನ ಸಂಹರಿಸಿ ಕಲಕಿಶರಧಿಯ ಸುಧೆಯನು ತರಿಸಿ ನೆಲಗಳ್ಳನ ಮದವನೆ ಮರ್ದಿಸಿ ಚೆಲುವಚೆಳ್ಳುಗುರಿನಿಂದುದರವ ಛೇದಿಸಿ ಸುಲಭದಿಂದ ಶುಕ್ರನ ಕಣ್ಮರಿಸಿ ಬಲುಕೊಬ್ಬಿದ ಕ್ಷತ್ರಿಯರನೊರೆಸಿ ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ ಲೀಲೆಯಿಂದ ವ್ರಜನಾರಿಯರೊಲಿಸಿ ಸಲೆದಿಗಂಬರರೂಪವ ಧರಿಸಿ ಮಾಧವ 1 ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ ಎಲ್ಲವೇದವನುದ್ಧರಿಸಿ ವಾರಿಧಿಯಲಿ ತಳೆದು ಅಮೃತಮಥನಕೆ ಶಿಲೆಯ ಝಲಿಸಿ ನಿಲಸಿದೆ ನಿಜಕೆ ಧರಣಿಯ ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ ಬಿಲ್ಲನೆತ್ತಿ ವರಿಸಿದೆ ಸೀತೆಯ ಮಲ್ಲರ ಮಡುಹಿ ತೋರಿದೆ ಚರಿಯ ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2 ನಿಗಮತಂದಿತ್ತೆ ನಗವಾನೆ ನೆಗವಾ ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ ಎಂದೆನಿಸಿ ಮೆರೆವ ನಿನ್ನಯ ರೂಪವಾ ಪೊಗಲಳವೇ ಭೂಧವ ನಿಗಮಕಾಗಿ ನೀ ತಮನ ಮರ್ದಿಸಿ ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ ಹಗೆಯ ಹಿರಣ್ಯನ ಅಸುವನೆ ಹರಿಸಿ ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ ಆ ಗರ್ವಿಸಿದರಸರ ಪರಶುವಿಂದ ವರೆಸಿ ಯಾಗರಕ್ಷಣೆಗೆ ನೀ ರಕ್ಷಕನೆನಿಸಿ ನೀಗಲು ಕುರುಕುಲ ಕಲಹವೆಬ್ಬಿಸಿ ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ ಬೇಗ ಬಂದು ಹಯವೇರಿ ಮೆರೆವ- ಬೇಗದಿ ತೋರೋ ಶ್ರೀಪಾದವಾ 3
--------------
ಉರಗಾದ್ರಿವಾಸವಿಠಲದಾಸರು
ಕೊಳಲೂದೋ ಕೃಷ್ಣ ಕೊಳಲೂದೊ ಪ ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ. ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ 1 ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ 2 ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ 3 ಮಧುರ ನಿನ್ನಯ ಗಾನವ ಕೇಳ್ವುದುಗದುಗು ವೀರನಾರಾಯಣನ ಮಹಾ ಪ್ರಸಾದೊ 4
--------------
ವೀರನಾರಾಯಣ
ಮಾಲೆಯ ಹಾಕುವೆ ಲೀಲೆಯಿಂ ತಳೆವುದು ಶ್ರೀಲಲನಾವರ ಪಾಲಿಸು ಕಂಠವ ಪ ಸಂಪಿಗೆ ಮಲ್ಲಿಗೆ ಮೊಲ್ಲೆಗುಲಾಬಿಯು ಸೊಂಪಿನ ಪಚ್ಚೆಯ ಇಂಪಿನಿಂ ಕಟ್ಟಿದ 1 ಮರುಗ ಸೇವಂತಿಗೆ ಪಾದರಿ ಹೂವಿನ ಮೆರೆವ ಮಂದಾರದ ಪಾರಿಜಾತದ ಸುರ 2 ಸುರಗಿ ಸುಗಂಧರಾಜ ಸುರಹೊನ್ನೆ ದವನವು ಪರಮಗುಣಾಕರ ವರದಹೆಜ್ಜಾಜಿಯ 3
--------------
ಶಾಮಶರ್ಮರು
ರಕ್ಷಿಸೆನ್ನನು ಶಾರದಾಂಬೆ ನೀನುಪಕ್ಷಿವಾಹನ ಸುತ ಮನಃಪ್ರತಿಬಿಂಬೆ ಪಆದಿಮಧ್ಯಾಂತರ'ತಳೆ ಅನಾದಿ ವಸ್ತು'ನಲ್ಲಿ ಭೇದರ'ತಳೆವಾದಿಜನರಿಗಗೋಚರಳೆ ನಿನ್ನ ಪಾದವೆ ಗತಿಯೆಂದರಾದರಿಸುವಳೆ 1ಚಿದ್ರೂಪೆಯಾಗಿಪ್ಪೆ ನಿಜದಿ ಹರಿ ಮುದ್ರಿತೆಯಾಗಿ ನಾದದಿ ತೋರ್ಪೆ ಮುದದಿ ಇದ್ದು ನೀ ಚಕ್ರಸಪ್ತಕದಿ ನಾಲ್ಕ ಹೊದ್ದಿ ನಾಮವನದ ಪ್ರPಟಿಪೆ ಕ್ರಮದಿ 2ಪರವೆಂದು ನಾಭಿಯಲಿರುವೆ ಮತ್ತೆ ಮೆರೆವೆ ಹೃದಯದಲ್ಲಿ ಪಶ್ಯಂತಿ ಭಾವೆಕೊರಳಲ್ಲಿ ಬಿಡದಿರುತಿರುವೆ ಮಧ್ಯಮೆವರ ನಾಮ ವೈಖರಿುಂದ ತೋರಿಸುವೆ 3ಗೀತೆ ಭಾಗವತರೂಪಿನಲಿ ನೀನು ಮಾತೆಯಂದದಲರ್ಥಗಳನು ಪ್ರೀತಿಯಲಿ ಮಾತು ಬೋಧಿಸಿ ಪರಮನಲಿ ನಿತ್ಯ ಪ್ರೀತಿಯನುಂಟು ಮಾಡಿದೆ ಮನಸಿನಲಿ 4ಮಂದಬುದ್ಧಿಯ ನೆರೆ ಬಿಡಿಸು 'ಂದೆ ಬಂಧಿಸಿ ಬಂದಕರ್ಮವ ಕಡೆಗೊಳಿಸುತಂದೆ ಕೃಷ್ಣನ ಮುಂದೆ ನಿಲಿಸು ುನ್ನೂ ಸಂದೇಹವೇಕೆ ನೀನೇ ಬಂದು ನೆಲಸು 5ತೋರಿಸು ಮತಿಗೆ ಜ್ಞಾನವನು ಇದು ಜಾರದಂದದಲರ್ಥಗಳನು ಪ್ರೀತಿಯನುಸೇರಿ ಚಿತ್ತದಲಿನ್ನು ನೀನು ಮಂದ ಬಾರದ ಹಾಗೆ ಮಾಡೆನ್ನ ಮುಕ್ತನನು 6ಕರುಣಾಪೂರಿತದ್ಟೃುಂದ ನಿನ್ನ ಚರಣದಲಿಂಬಿಟ್ಟು ಕೊಳಲದರಿಂದನೆರೆ ಧನ್ಯನಹೆನು ನಿನ್ನಿಂದ ಕೂಡೆ ತಿರುಪತಿ ವೆಂಕಟನೊಲವದರಿಂದ 7ಓಂ ಕಮಲಾನಾಥಾಯ ನಮಃ || 2 ||ಗುರುಸ್ತುತಿಗಳು:
--------------
ತಿಮ್ಮಪ್ಪದಾಸರು