ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದೀದೇಹ್ಯವನು ನಂಬಿದಿ ಮನವೆ ನೀ ಏನೆಂದೀ ದೇಹ್ಯವನು ನಂಬಿದಿ ಪ ಏನೆಂದು ನಂಬಿದ್ಯೋ ಆನಂದದ್ಹಿಗ್ಗುತ ಕ್ಷೀಣವಾಗೊಂದುದಿನ ಮಣ್ಣು ಗೂಡುವುದರಿತು ಅ.ಪ ತಳಕ್ಹಾಕಿ ಜೋಡಿಸಿ ಹಲವು ನರಗಳಿಂದ ಬಲವಾಗಿಬಿಗಿದ ಈ ಎಲುವಿನ ಹಂದರ 1 ರೋಗಕ್ಕೆ ಇದು ತವರಾಗಿ ಒಂದಿನ ನಾಶ ವಾಗಿ ತಾ ಕೈಬಿಟ್ಟು ಪೋಗುವ ಮಂಟಪ 2 ಹಲವು ವಿಧದಿ ಮಜ್ಜ ಮಲ ಮೂತ್ರ ಬಲುಹೇಯ ಕುಂಡಲ 3 ಬಿಲದ್ವಾರ ಒಂಬತ್ತು ತುಳುಕಿತುಂಬ್ಹರಿಯುತ ತೊಳೆಯದಿರಲು ನಿಮಿಷ ಹೊಲಸಿಕ್ಕಿ ನಾರುವುದು 4 ತಂದೆ ಶ್ರೀರಾಮನಂ ಹೊಂದಿ ಭಜಿಸದೆ ಗಾಢ ಅಂಧಕಾರದಿ ಬಿದ್ದು ನಂದಿಪೋಗುವ ತನು 5
--------------
ರಾಮದಾಸರು
ಪ್ರಾಣದೇವರ ಸ್ತೋತ್ರ ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ || ನೋಡಿದ್ಯಾ ಹನುಮನಾರ್ಭಟವ - ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. || ಮಾತೆ ನಿನ್ನಾಜ್ಞೆಯ ಕೊಂಡು - ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ 1 ಸೊಕ್ಕಿ ರಾವಣನೆಂಬ ಗಂಡ - ಮಹ ಲಕುಮಿಯನೆ ಕರಕೊಂಡ - ರಾಮ ರಕ್ಕಸಾಂತಕ ಆಕೆ ಗಂಡ - ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ 2 ಎಷ್ಟೇಳ್ಹಲವನ ಪ್ರತಾಪ - ನೋಡುಸುಟ್ಟನೆಂಬ ಲಂಕಾ ದ್ವೀಪ - ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ
--------------
ಕೇಶವವಿಠ್ಠಲರು