ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಕರುಣಾಳುಗಳು ಈ ಗುರುಗಳು ಶ್ರೀ ವರತಂದೆ ಮುದ್ದುಮೋಹನವಿಠಲಾಖ್ಯರು ಪ. ಶಾಂತರು ದಾಂತರು ಸಂತೋಷ ಸುಖಿಗಳು ಅಂತರಂಗದಿ ಹರಿಯ ಧ್ಯಾನಿಸುವರು ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1 ನಿರಪೇಕ್ಷೆಯಿಂದಲಿ ಪರರಿಗುಪಕಾರವನು ತೆರವಿಲ್ಲದೆಲೆ ಸತತ ಮಾಡುತಿಹರು ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2 ಸುಪ್ರೀತರಾಗಿನ್ನು ಈ ಶರೀರದ ಒಳಗೆ ಶ್ರೀಪತೀ ತೈಜಸನ ವ್ಯಾಪಾರದಿ ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3 ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ ನಿಲ್ಲದೇ ಮನಸು ಬಹು ತಲ್ಲಣಿಸುತಿರಲು ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4 ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ- ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5
--------------
ಅಂಬಾಬಾಯಿ
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ