ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು