ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ಸದ್ಗತಿ ಆಗುವುದೆನಗೆ ಯೋಗಿಗಳ ಒಡೆಯ ಹರಿಯೆ ಈಗಾಗಲೆ ತಿಳಿಸಿ ಸಾಗುವಂತೆ ಸಾಧನ ಬ್ಯಾಗ ಮಾಡಿಕೊ ನಾಗತಲ್ಪನೆ ಪ ಮೇಲಧಿಕಾರಿಯು ಕೊಂಡಾಡಲು ಕುಲ ಉದ್ಧಾರವೆಂದು ಹಿಗ್ಗುವೆ ಕಲುಷ ಕಂಡಾಗÀಲು ಅಳುತ ಧರೆಗೆ ಇಳಿವೆನೊ ನಾನು 1 ಶಿಕ್ಷ ರಕ್ಷ ಸಧ್ಯಕ್ಷ ಲಕ್ಷ್ಮೀಪತಿಯೆಂದರಿಯದೆ ಕುಕ್ಷಿ ಭರಣಕೆ ಯೋಚಿಸುವೆ ಪಕ್ಷಿವಾಹನನಲ್ಲಿ ಲಕ್ಷ್ಯವಿಲ್ಲದೆ ಬಕ ಪಕ್ಷಿಯಂತೆ ಧೇನಿಸುವೆ ನಾ 2 ನಷ್ಟ ದೇಹ ಪುಷ್ಟಿಗಾಗಿ ದುಷ್ಟರಿಗೆ ಎನ್ನ ಕಷ್ಟ ಪೇಳಲು ದೃಷ್ಟಿಸಿ ನೋಡಿದರೆ ಬೆಟ್ಟ ಮೇಲಿದ್ದಂತೆ ಕಂ ಗೆಟ್ಟು ಮೊರೆಯಿಸುವೆ 3 ಒಂದು ಲಾಭವಿಲ್ಲದೆ ಮಂದಿ ನೆರಹಿ ಸಂದಿಗೊಂದ್ಹರಿದ್ಯಾಡಿ ಸಂದು ಹೋಯಿತÀು ಹೊತ್ತಯೆಂದು ಆಸ್ಥಾನಕೆ ಮಿಂದು ಬ್ಯಾಗನ್ನ ತಿಂದೋಡುವೆನೊ 4 ಮಾನನೀರ ಚೆಲ್ವಿಕೆಗೆ ಮನಸೋತು ನೆನೆನೆನೆದು ಬೆಂಡಾಗುವೆ ಹೀನರಾ ಕೂಡಿಕೊಂಡು ದೀನರಾ ಬಾಯಿಬಡಿದು ಧನ ಸಾಧಿಸಿದ್ದು ಕೊನೆಗೆ ಸಾಯುವ ನರಗೆ 5 ಉದಯದಲೆದ್ದು ನದಿಗೆ ಪೋಗಿ ನಾ ಮುದದಿಂದ ಮಿಂದು ಉದಯಾರ್ಕಗಘ್ಯ ಒದಗೀಸಿ ಕೊಡದ ಮದಡನಾಗಿದ್ದವಗೆ 6 ವರ ಸುದರ್ಶನ ಗ್ರಂಥಗಳ ಗುರುಗಳಲ್ಲಿ ನಿರುತ ಪಠಿಸಲಿಲ್ಲ ಭಾಗವತ ಪುರಾಣಗಳು ಪರಮ ಭಕ್ತೀಲಿ ಕೇಳಲಿಲ್ಲ 7 ಭಾವ ಶುದ್ಧಿಯಿಂದ ದೇವತಾರ್ಚನೆ ಆವ ಕಾಲಕು ಮಾಡಲಿಲ್ಲ ಪವನಸಖ ಮಖದೊಳಾಹುತಿನಿತ್ತು ಕವಿಗಳಿಗನ್ನ ಕೊಟ್ಟವನಲ್ಲ 8 ಧ್ಯಾನ ಮಾಡುವುದನ್ನು ಮೌನಿಗಳ ಕೇಳಿ ಮನನ ಮಾಡಲಿಲ್ಲ ಪಾದ ಕನಸಿನಲಾದರೂ ಒಮ್ಮೆ ನೋಡಲಿಲ್ಲ 9
--------------
ವಿಜಯ ರಾಮಚಂದ್ರವಿಠಲ
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ
ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ತಿರುವೆಂಗಳೇಶಗೆ ಪ ಮಾಧವ | ನರಹರಿ ಮಧುಸೂದನಾ | ಅಚ್ಯುತ | ಗಿರಿಜನುತ ನಾರಾಯಣಾ 1 ಕ್ಷೀರ ವಾರಿಧಿಶಯನ ವಾಮನ | ಗೋಪಿ ಜನ | ನವನೀತ | ಚೋರ ರಿಪು ಸಂಹಾರ ಹರಿ ದಾಮೋದರ 2 ಗರಳ ತಲ್ಪನೆ | ಕರುಣಾಳುಗಳ ಒಡೆಯನೆ | ಸಿರಿ ವಿಜಯವಿಠ್ಠಲನ | ಚರಣ ಕಮಲಕೆ ನಮೋ ನಮೋ 3
--------------
ವಿಜಯದಾಸ
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ
ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ ಅ- | ಪಾರ ಜನುಮಕ್ಕೆ ನೀನೆ ದೈವವೆಂದು ಪ ಶೂನ್ಯಜ್ಞನು ನಾನು ಅನ್ಯಾಥಾ ಗತಿ ಅರಿಯೆ | ಅನ್ಯರಲ್ಲಿಗೆ ಕೊಡದೆ ಧನ್ಯನ ಮಾಡೊ ಬಿಡದೆ 1 ಕಲ್ಪತರುವೆ ಎಂದು ವಪ್ಪದಿಂದಲಿ ಬಂದೆ | ಆಲ್ಪರಿಯದಂತೆ ನಾಗತಲ್ಪನೆ ಫಲವೀಯೋ 2 ವರುಷಾವರುಷ ಹೀಗೆ ದರುಶನಕೊಡು ಎನಗೆ | ಹರುಷವಾಗಲಿ ಪರಮಪುರುಷ ವಿಜಯವಿಠ್ಠಲಾ 3
--------------
ವಿಜಯದಾಸ