ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲದ ಪದಾರ್ಥಕ್ಕೆ ಏನೇನೋ ಹೆಸರು ಬಿಡಿ ಪ ಬಲ್ಲೆ ಇವೆಲ್ಲಾ ನಾನೆಂಬುವರು ದುರ್ಜನರು | ನಿಜ ಅ.ಪ ನಾವೇ ದೇವರ ಮಾಡಿದೆವೋ ದೇವರು ನಮ್ಮನು ಮಾಡಿದನೋ ಭಾವಿಸಿ ನೋಡಿದರೆ ದೈವ ನಾವಲ್ಲದ್ಯಾರು 1 ವಿಷ್ಣು ಈಶ್ವರನು ಬ್ರಹ್ಮ ಎಲ್ಲಿರುವರು ನಾವೆ ವಿಶ್ವವ್ಯಾಪಕರು ವಿವಿಧ ರೂಪವಾಗಿಹೆವು 2 ಸರ್ವವೂ ಸುಳ್ಳವನಿಗೆ 3 ಬೆಳಕಿಗೆ ಕತ್ತಲು ವೈರಿ ಕತ್ತಲಿಗೆ ಬೆಳಕು ಶತ್ರು ಹೊಳವಿಗಿಂತಲೂ ಕತ್ತಲೆಯೇ ಲೇಸು ನಮಗೆ 4 ಪರಿಯಲಿ ನಿರುತ ಸಂಸಾರ ಚಕ್ರದಿ ದುರುಳರು ತೊಳಲುವರು 5
--------------
ಗುರುರಾಮವಿಠಲ
ಗಂಡನೆ ಪ್ರಾಣಗಂಡನೇ ಪ ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ ಲಿಬ್ಬಿಯಿದ್ದರೆ ತೆಗೆದು ತಾರೆಂಬನು ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು ಒಬ್ಬರಗೊಡವೆ ನಮಗ್ಯಾಕೆ ಎಂಬುವನು 1 ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ ಯಾರೆ ನಿನಗೆ ಬಲಯೆಂಬುವನು ಸೋರುವ ಮನೆಯಂತೆ ಎನ್ನ ಸಂಸಾರ 2 ಬಟ್ಟೆ ಮಾತಿನ್ನೇನು ಯಣ್ಣೆಕಾಣದು ತಲೆಯೇನ್ಹೇಳಲಿ ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ ಗನ್ನಘಾತಕನಿವ ಕಲಿಕಾಲಜಗಳ 3 ಓದುಬರಹಗಳೆಂಬ ಹಾದಿಯ ತಾಕಾಣ ಆದದ್ದಾಗಲಿಯಿನ್ನೇನು ಮಾಡುವೆನಾನು 4 ಇರುಳು ಹಗಲುಯನ್ನ ಕರೆಕರೆ ಪಡಿಸುವ ಚರಣಕಮಲವೆನಗೆ ದೊರೆಯುವುದ್ಹ್ಯಾಗೆ 5
--------------
ಗುರುರಾಮವಿಠಲ
ಪಡಿಶಟ್ಟು ಪಟ್ಟಣವ ಕೇಳದೆಯಕ್ಕಪಡಿಶಟ್ಟು ಪಟ್ಟಣವಪಡಿಶಟ್ಟು ಪಟ್ಟಣದ ವಿವರ ಕೇಳೇಹುಟ್ಟಳಿವುದಕೆ ಕಡೆಯಿಲ್ಲ ಪ ಪಟ್ಟಣದರಸಗೆ ತಲೆಯೇ ಇಲ್ಲಪಟ್ಟಣದರಸನ ಹೆಂಡತಿ ರಂಡೆಪಟ್ಟುಗೊಡುವ ಓಲೆಕಾರರು ಪಾಪಾಶಿ ಬೆಲೆಯವರು 1 ಸಿಂಗಲೀಕನವ ಪ್ರಧಾನಿ ಶಿಷ್ಟನೀಗವನು ಕೋಣಮಂಗಳನೀಗವನು ತಳವಾರಅಂಗತಿರುಗುವವನೆ 2 ಕರಣೀಕನೀಗವ ಮೊಂಡನೊಣವು ಎಂಬುವನವನಾಚಾರಿಹಿರಿಯ ಗೂಗೆ ಬಹಳ ಮುದುಕಿ ಎಲ್ಲರಿಗು ಹಿರಿಯವಳು 3 ಹದ್ದು ಈಗ ತಾ ದಳವಾಯಿನೀಚರೆಲ್ಲರು ನಾಯಕರುಇದ್ದ ವಕ್ಕಲು ಎಲ್ಲ ದುಃಖಿಗಳು ಬಲು ಎಡವಟ್ಟುಗಳು 4 ಗುರು ಕರುಣದಿ ಅರಸಗೆ ತಲೆ ಬರಲುಅರಸನ ಹೆಂಡತಿ ಮಂಗಳೆಯಾಗಲುಗುರು ಚಿದಾನಂದ ತಾನಾದರಸು ಎಲ್ಲರು ಮುಕ್ತರೆ 5
--------------
ಚಿದಾನಂದ ಅವಧೂತರು
ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ ಪ ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ1 ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ 2 ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ 3
--------------
ಕನಕದಾಸ
ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು