ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು ಪರಿ ನೆಲವನುಳಲಿಬೇಕು 1 ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು 2 ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ 3
--------------
ವಿದ್ಯಾಪ್ರಸನ್ನತೀರ್ಥರು
ಹರಿಕಥಾಮೃತಸಾರದ ಫಲಶ್ರುತಿ ಶ್ರೀ ಮದಶ್ವಗ್ರೀವನೊಲುಮೆಗೆ ಧಾಮರೆನಿಪ ಶ್ರೀ ವಾದಿರಾಜರುಪ್ರೇಮದಲ್ಲಿ ಜಗನ್ನಾಥದಾಸರ ಸ್ವಪ್ನದಲಿ ಬಂದುಶ್ರೀ ಮನೋರಮನರಿಪ ತತ್ವ ಸು ಸೌಮನದ ಮಾಲಿಕೆಯನಿತ್ತು-ದ್ದಾಮ ಗ್ರಂಥವ ರಚಿಸಿರೆನುತಲಿ ನುಡಿದ ಕಾರಣದೀ ಪ ಭಾಗವತ ಗಾರುಡ ಭವಿಷ್ಯೋತ್ತರ ಪುರಾಣಚಾರು ವಿಷ್ಣು ರಹಸ್ಯ ಪಂಚರಾತ್ರಾಗಮ ವಾಯುಸಾರ ಗುರವೃತ್ಪ್ರವೃತ್ತವು ಈರ ಸಂಹಿತಾದಿತ್ಯವಾಗ್ನೇಯಪಾರ ರಸಗಳ ತೋರ್ಪ ಶ್ರೀ ಗುರು ಮಧ್ವ ಶಾಸ್ತ್ರದಲೀ 1 ಸಾರ ಕ್ರೋಢೀಕರಿಸಿ ದೀನೋ-ದ್ಧಾರಗೋಸುಗ ಹರಿಕಥಾಮೃತ ಸಾರವನು ರಚಿಸೀಸ್ಥೈರ್ಯ ಮಾನಸದಿಂದ ಭಾವೀ ಭಾರತೀಪತಿ ವಾದಿರಾಜರಭೂರಿ ತೋಷಕೊಪ್ಪಿಸುತಲಾಪಾರ ಮುದ ಪಡೆದೂ 2 ಸಾಸಿರಾರ್ಥಗಳೊಂದು ಪದಕವಕಾಶವಿರುವೋ ಶ್ರೀದ ವಿಷ್ಣುಸಾಸಿರದ ನಾಮವನು ಯೋಚಿಸಿ ಇಹರು ಗ್ರಂಥದಲೀಈಸು ರಹಸ್ಯವನರಿತು ಪಠಪಗೆ ಏಸು ದೂರವೊ ಮುಕ್ತಿಬರಿದಾ-ಯಾಸ ಬಟ್ಟುದರಿಂದ ಫಲವೇನಿಲ್ಲವೀ ಜಗದೀ 3 ಹ ಯೆನಲು ಹರಿಯೊಲಿಯುವನು ತಾ ರಿ ಯೆನಲು ರಿಕ್ತತ್ವ ಹರಿಸುವಕ ಯೆನಲು ಕತ್ತಲೆಯೆಂಬಾಜ್ಞಾನವನು ಪರಿಹರಿಪಾಥಾ ಯೆನಲು ಸ್ಥಾಪಿಸುವ ಜ್ಞಾನ ಮೃಯೆನಲು ಮೃತಿಜನಿಯ ಬಿಡಿಸುವತ ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯಾ 4 ಸಾ ಯೆನಲು ಸಾಧಿಸುವ ಮುಕ್ತೀ ರ ಯೆನಲು ರತಿಯಿತ್ತು ರಮಿಪನುಕಾಯ ವಾಙ್ಮನದೆಂಟು ಅಕ್ಕರ ನುಡಿದರದರೊಳಗೇಶ್ರೀಯರಸು ವಿಶ್ವಾದಿ ಅಷ್ಟೈಶ್ವರ್ಯ ರೂಪದಿ ನಿಂತು ತಾ ಪರ-ಕೀಯನೆನಿಸದೆ ಇವನ ಮನದೊಳು ರಾಜಿಪನು ಬಿಡದೇ 5 ಅನಿರುದ್ಧ ಧರ್ಮವು ದೊರಕಿಸುವ ಪರಮ್ಹರುಷದಲ್ಲಿ ಸ-ತ್ವರ ಕಥಾಯೆನೆ ಕೃತಿರಮಣನರ್ಥಗಳ ಹನಿಗರೆವಾವರ ಅಮೃತಯೆನಲಾಗ ಶ್ರೀ ಸಂಕರುಷಣನು ಕಾಮವನು ಯೋಜಿಪಸರಸ ಸಾರೆನೆ ವಾಸುದೇವನು ಮೋಕ್ಷ ಕೊಡುತಿಪ್ಪಾ 6 ನಿತ್ಯ 7 ಚಾರುತರದೀ ಹರಿಕಥಾಮೃತ ಸಾರಕೃತ ಋಷಿ ಭಾರದ್ವಾಜರುಸಾರ ಹೃದಯದಿ ನಿಂತು ಸಕಲ ಸು ಶಾಸ್ತ್ರದಾಲೋಕಾಸಾರಿ ಸಾರಿಗೆ ಮಾಡಿ ಮಾಡಿಸಿ ಸೂರೆಗೊಟ್ಟಾನಂದ ಚಿನ್ಮಯಪಾರವಾರಾಶಯನ ಶ್ರೀ ಕಮಲಾಪತಿ ವಿಠಲಾ 8
--------------
ಕಮಲಪತಿವಿಠ್ಠಲರು
208ಎಂಥ ಚೆಲುವೆಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮಪಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ 1ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ 2ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ 3ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ 4ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ 5
--------------
ಪುರಂದರದಾಸರು