ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲನೀತ ಶಕ್ತ ಸದ್ಗುರುನಾಥ ಸಕಲ ಸಮ್ಮತ ಏಕೋದೇವನೀತ ಧ್ರುವ ಬಲಿಯಬಾಗಿಲ ಕಾಯ್ದು ಒಲಿದ ಫಲುಗುಣಗೀತ ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ ಸಲಹಿ ಪಾಂಡವರ ರಕ್ಷಿಸಿದಾತ 1 ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ ನಷ್ಟಾಜಮಿಳನ ನಿಷ್ಠೆಮಾಡಿದಾತ ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ ಶಿಷ್ಟಜನಪಾಲಕ ಸೃಷ್ಟೇಶ 2 ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ ಮೂಲೋಕದೊಡೆಯ ಶ್ರೀಹರಿಯು ಈತ ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ ಕುಲಕೋಟಿ ಬಂಧು ತಾ ಬಳಗವೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮೂಲನಾರಾಯಣ ವಟಪತ್ರಶಾಯಿ ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ. ಎಂದೆಂದಿಗೂ ಎನಗೆ ತಂದೆ ನೀ ದೇವಾ ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ. ಸ್ವಚ್ಛ ಮನವಮಾಡು ಮತ್ಸರೂಪಕನೆ ತುಚ್ಛ ಮನಕೊಂದ ವಿಶ್ವವ್ಯಾಪಕನೆ 1 ಮುಂದೆನ್ನ ಉದ್ಧರಿಸು ಮಂಧರೋದ್ದರನೆ ಇಂದ್ರಾದಿ ಸುರರಿಂದ ವಂದ್ಯಾಸುರವರನೆ 2 ಹಿರಣ್ಯಾಕ್ಷನ ತರಿದಂಥ ಧೀರ ಭರಧಿ ವೇದವ ತಂದ ಮಹಿಮೆ ಅಪಾರ 3 ತರಳ ಪ್ರಹ್ಲಾದನ ತಲೆಗಾಯ್ದ ರೂಪ ಸರಳ ಮತಿಯನಿತ್ತು ಪಾಲಿಸು ಶ್ರೀಶ 4 ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ ಯೊಳ ಎನ್ನ ಮನವಿಡು ವಾಮನಮೂರ್ತಿ 5 ಕ್ಷತ್ರಿಯ ಕುಂಭವ ಸವರಿದ ರಾಮ ಶತಷಟ್ಯಂದರ ಬಡಿದ ದಿವ್ಯ ನಾಮ 6 ದಾನವ ಕುಲಕುಟಾರ ಶ್ರೀ ರಾಮ ಮಾನಾಭಿಮಾನವು ನಿನ್ನದೋ ರಮ 7 ಮಲ್ಲರ ಗೆದ್ದಂಥ ದೂಕುಳ ವೈರಿ ಗೊಲ್ಲಬಾಲಕರ ಕೂಡಾಡಿದ ಶೌರಿ ಶೌರಿ 8 ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ ಉಪಗಮನ ವೀಯೋ ವಿಶ್ವೇಶ ಸುಜ್ಞಾನ 9 ಕಲಿಮುಖದೈತ್ಯರ ಅಳಿಯುವ ಕಲ್ಕಿ ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ10 ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು ಶರಣುಜನರಪಾಲ ಏನು ಬಂದಾಗ್ಯು 11
--------------
ಕಳಸದ ಸುಂದರಮ್ಮ
ನರಸಿಂಹ ಮಂತ್ರ ಒಂದೇ ಸಾಕು -ಮಹಾ - |ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |ಅಸುರನೊಡಲ ಬಗೆದ ದಿವ್ಯವiಂತ್ರ ||ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |ಶಿಷ್ಟ ವಿಭೀಷಣನ ಪೊರೆದ ಮಂತ್ರ ||ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |ಕೊಂಡಾಡೆ ಲೋಕಕುದ್ದಂಡ ಮಂತ್ರ ||ಗಂಡುಗಲಿ ಪ್ರಚಂಡಹಿಂಡು ದಾನವರ |ಗಂಡ ಪುರಂದರವಿಠಲನ ಮಹಾ ಮಂತ್ರ3
--------------
ಪುರಂದರದಾಸರು