ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ಪ. ಕ್ಷೋಣಿಯೊಳಗೆ ಎಣೆರಹಿತ ಪಾವನಚರಿತ ಸದ್ಗುಣಭರಿತಅ.ಪ. ಅಂಜನೆ ಸುತನೊ ಮಹಾ ಅದ್ಭ್ಭುತನೊತರÀಣಿ ಮಂಡಲಕೆ ಮುಟ್ಟಿಹಾರಿದ ಬಲದ ಶ್ರುತಿಯೊ ವಿಕ್ರಮಗತಿಯೊಸುರರಾಯುಧ ನೆಗ್ಗಿಸಿದ ಕಪಿಯಗ್ರಣಿಯೊ ವಜ್ರದ ಖಣಿಯೊಶರಣ ವಂದಿತ ಚರಿತ ಮೂರ್ಲೋಕ ಗುರುವೊ ಕಲ್ಪತರುವೊ1 ರಾಮ ಪದಾಂಬುಜ ಬಿಂಬಪರಾಗ ಮಧುಪನೊ ದೇವಾಧಿಪನೊತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೊಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ 2 ಪಾದ ಪಡೆದಂಥ ಪದವೊ ಸಾಗರ ಮದವೊನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊಅನುದಿನದಲಿ ಹಯವದನನ ನೆನೆಯುವ ದಯವೊ ಗತಿ ಆಶ್ರಯವೊ3
--------------
ವಾದಿರಾಜ
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ 1 ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ 2 ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ 3 ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) 4 ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ 5
--------------
ಶ್ರೀಶಪ್ರಾಣೇಶವಿಠಲರು