ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟ ಲಿಂಗವ ಪೂಜಿಸೆಂದು ಗುರುವು ಕೈಯಲಿ ಕೊಟ್ಟಇಷ್ಟಲಿಂಗ ನೀನೆ ಎಂದು ಕಿವಿಯಲಿ ಹೇಳಿಬಿಟ್ಟ ಪ ಉದಯದಲಿ ಲಿಂಗವನ್ನು ಬಯಲ ಕಡೆಗೆ ಒಯ್ಯುವೆಅದರ ತರುವಾಯದಲಿ ಲಿಂಗಮುಖವನೀಗ ತೊಳೆವೆಹದ ಮಾಡಿಯೆ ಬಿಸಿನೀರನು ಲಿಂಗಕ್ಕೆ ಎರೆವೆವಿಧವಿಧದ ವಸ್ತ್ರಗಳನ್ನು ಲಿಂಗಕ್ಕೆ ಉಡಿಸುವೆ 1 ಬಸಿತವನು ಹಣೆಯ ತುಂಬ ಲಿಂಗಕ್ಕೆ ಧರಿಸುವೆಕುಸುಮವೇನು ದೊರಕಿದರು ಲಿಂಗಕ್ಕೆ ಮುಡಿಸುವೆಬಿಸಿಯಾರಿದ ಎಡೆಯ ನಾನು ಲಿಂಗಕ್ಕೆ ಉಣಿಸುವೆಪಶುಪತಿಯೆ ಉದಕವೆಂದು ಲಿಂಗಕ್ಕೆ ಕುಡಿಸುವೆ2 ಲಿಂಗ ಕೊಳ್ಳೆಂದು ತಾಂಬೂಲ ನೀಡುವೆಭಂಗಭವನ ಸ್ತೋತ್ರ ಮಾಡಿ ಲಿಂಗವನ್ನು ಮಲಗಿಸುವೆಲಿಂಗವನ್ನು ನಡೆಸ್ಯಾಡಿ ಲಿಂಗವನ್ನು ಮಲಗಿಸುವೆಲಿಂಗ ಚಿದಾನಂದ ಬ್ರಹ್ಮಲಿಂಗವಾಗಿ ಇರುತಿಹೆ 3
--------------
ಚಿದಾನಂದ ಅವಧೂತರು
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ಪ ಭೂತಳದಿ ಪ್ರಖ್ಯಾತವಾದ ಶ್ವೇತಗಿರಿನಿವಾಸಯನ್ನ ಪೊರಿಯೊ ದೇವಾ ಅ.ಪ ಪಾಥೋರುಹ ಭಜಿಪ ಸತತ ಸೀತ ಲಕ್ಷ್ಮಣ ರಘು ನಾಥನು ಸಂಚರಿಸಿದಂಥ 1 ಸಪ್ತಋಷಿಗಳಿರುವ ಕೃಷ್ಣಾ ಚೋತ್ತರ ವಾಹಿನಿಯ ಸ್ನಾನ ಕ್ಷೇತ್ರಕಾಶಿಗಿಂತ ಫಲದಿ ಉತ್ತಮವೆಂದೆನಿಸಿದಂಥ 2 ಶ್ರೀಮನೋಹರ ನಿಮ್ಮಯ ಪದ ತಾಮರಸವ ಪೂಜಿಸಲು ಸೂತ್ರಾಮ ಲೋಕದಿಂದ ಬರುವ ಕಾಮಧೇನು ಚರಿಸಿದಂಥ 3 ಅಷ್ಟತೀರ್ಥಂಗಳಿರುವ ಶ್ರೇಷ್ಠಸ್ಥಾನವೆಂದು ತಿಳಿದು ನಿಷ್ಠೆಯಿಂದ ಸೇವಿಸುವರ ಭೀಷ್ಠಗಳನ್ನು ಸಲಿಸುವಂಥ 4 ಶ್ವೇತರಾಜ ತಪವಗೈದು ಪೂತವಾದ ಪದವಿ ಪಡೆದ ಆ ತರುವಾಯದಲಿ ಗಿರಿಯು ಶ್ವೇತನಾಮದಿಂದ ಮೆರೆಯೆ 5 ಅಂದವಾಗಿ ತಿಳಿದು ಭಕುತಿ ಯಿಂದ ಶೇವಿಪ ಮನುಜಗೆ ಭವ ಬಂಧ ಬಿಡಿಸ್ಯಾನಂದ ಗರಿವ 6 ತುಂಗಗಿರಿಯ ಸ್ಥಾನದಲ್ಲಿ ಶೃಂಗನೆಂಬ ಋಷಿಯು ತಪದಿ ಮಂಗಳ ಪ್ರದ ಕಾರ್ಪರನರ ಸಿಂಗನೊಲಿಸಿ ವರವ ಪಡೆದ 7
--------------
ಕಾರ್ಪರ ನರಹರಿದಾಸರು