ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆನೆನೆ ಮನವೆ ನೀ ಘನಸುಖವನೆ ಪಡೆವೆ ಪ ಭಾರ ನಿನ್ನದೆಂಬ ಪೋರ ಪ್ರಹ್ಲಾದನ ಘೋರಬಂಧವ ನಿವಾರಿಸಿ ಪೊರೆದವನ 1 ಕರಿಮಕರಿಗೆ ಸಿಲ್ಕಿ ಹರಿಯೆಂದು ಕೂಗಲು ಭರದಿ ಒದಗಿ ಮಹಕರುಣದಿ ಸಲಹಿದವನ 2 ದುರುಳನ ಸಭೆಯೊಳು ತರುಣಿಯು ಮೊರೆಯಿಡಲು ವರಹ ಶ್ರೀರಾಮ ನಾರಿಮರಿಯಾದೆ ಕಾಯ್ದವನ 3
--------------
ರಾಮದಾಸರು
ವಾಗೀಶವಂದಿತ ಸಲಹೈ ವರದಾತ ಪೊರೆಯೈ ಪ. ಕರಿ ಮಕರಿಗೆ ಸಿಕ್ಕಿ ಕರೆಕರೆ ಪಡುತಲಿ ಹರಿಹರಿ ಪೊರೆಯೆನೆ ಭರದಿ ನೀ ಪೊರೆದೆಯೈ 1 ತರುಣಿಯು ಮೊರೆಯಿಡೆ ತ್ವರಿತದಿಂ ವರವಿತ್ತೈ 2 ಕಂದನು ಕೂಗಲು ಕಂಬದಿಂ ಬಂದೆಯೈ ತಂದೆ ನೀನೆಂದೆನೆ ಬಂದು ಕೈಪಿಡಿ ದೊರೆ 3 ಅರಿಗಳಟ್ಟುಳಿಯಿಂದೆ ಪರಿಪರಿಯಿಂ ನೊಂದೆ ಅರಿವನು ಕರುಣಿಸಿ ನರಹರಿ ಸಲಹೆಂದೆ 4 ಶೇಷಭೂಷಣವಿನುತ ಶೇಷಶಯನ ಮಹಿತ ಶೇಷಶೈಲೇಶನೆ ಪೋಷಿಸೈ ಶ್ರೀಶನೆ 5
--------------
ನಂಜನಗೂಡು ತಿರುಮಲಾಂಬಾ