ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ಬಾರೋ ದೇವ ದೇವನೇ ಭಾವಜಾರಿಪ್ರಿಯನೆಬಾರೊ ಮನೆಗೆ ಶ್ರೀನಿವಾಸನೆ ಪಬಾರೊ ಭಾಮೆ ರುಕ್ಮಿಣೀಶಬಾರೋಯೋಗಿಹೃದಯವಾಸಬಾರೊ ಭಕ್ತಜನರ ಪೋಷನೇ 1ನಂದ ಗೋಪ ತನಯಗೋಪ-ವೃಂದದೊಳಗೆ ಕುಣಿದು ಮೆರೆದುಮಂದರೋದ್ಧರಮದನಜನಕನೇ2ಅಂದಿಗೆ ಕಾಲ್ಗೆಜ್ಜೆ ನಾದ-ದಿಂದ ಕುಣಿದು ನೆರೆದು ನಲಿದುಸುಂದರಾಂಗ ಶುಭಕರಾಂಗನೇ 3ಸರಿಗೆ ನಾಗಮುರಿಗೆ ಮುತ್ತಿನಸರಗಳ್ಹೊಳಯೆ ಉರದಿ ಲಕ್ಷ್ಮಿಜರಿಪೀತಾಂಬರ ಧಾರಿ ಶೌರಿಯೇ 4ಕೋಟಿ ಸೂರ್ಯಕಾಂತಿ ಮುಖಲ-ಲಾಟ ಕಸ್ತೂರಿ ತಿಲಕ ಶಿರದಿ ಕಿ-ರೀಟ ಧರಿಸಿ ಮೆರೆವ ದೇವನೇ 5ಮುರಳಿ ನುಡಿಸಿ ತರುಣಿಯರನುಮರುಳು ಮಾಡಿ ತುರುಕರುಗಳಪೊರೆದಕಮಲನಾಭವಿಠ್ಠಲನೆ6
--------------
ನಿಡಗುರುಕಿ ಜೀವೂಬಾಯಿ