ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
ರುಕ್ಮಿಣಿಯ ದಿವ್ಯತರ ರೂಪವನು ವರ್ಣಿಸಲು ರುಕ್ಮಗರ್ಭಗೆ ವಶವೆ ರೂಢಿಯೊಳಗೆ ಪ ಮಿಕ್ಕ ಮನುಜರ ಮಾತು ಲೆಕ್ಕವೇತರದಯ್ಯಾ ಪಕ್ಷಿವಾಹನ ಕೇಳು ಪರಮಪುರುಷ ಅ.ಪ ಆ ದೇವಿಯಂಘ್ರಿಗಳ ಕೋಮಲಕೆ ಕುರುಹಾಗಿ ಭೂದೇವಿ ತರುಗಳಲಿ ತಳಿರ ತಾಳಿಹಳೊ 1 ಪಾದ ನಖಕಾಂತಿ ತಾ ಪ್ರಕಾಶಿಪ ತೆರೆಯು ಈ ಪುತ್ಥಳಿಯ ಗಮನವಾದರ್ಶ ಹಂಸಕೆ 2 ಬಡನಡುವ ತಾ ನೋಡಿ ಅಡವಿ ಸೇರಿತು ಸಿಂಹ ಚೆಲುವ ನೇತ್ರವ ನೋಡಿ ಚಪಲ ಹೊಂದಿತು ಹರಿಣ3 ನೀಲವೇಣಿಯ ನೋಡಿ ನಾಗಗಳು ನಾಚಿದವುಶ್ರೀ ಲಕುಮಿಯಾ ಕನ್ಯೆ ಶ್ರೀ ಕರಿಗಿರೀಶನರಾಣಿ 4
--------------
ವರಾವಾಣಿರಾಮರಾಯದಾಸರು