ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ ಏನಿದು ಸಾವಕಾಶ ಪ. ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ- ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ ಎಂದೀ ಶ್ರುತಿ ಪುರಾಣಗಳ ಆದರೆ ನನ್ನನು ಬರಿದೆ ಇದು ರೀತಿಯೆ ನಿನಗೆ1 ಬಂದಡಿಗಡಿ ಇಡುತ ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ ಒಂದನಾದರು ಮನಕೆ ಅಭಯವನಿತ್ತು ಪೊರೆದೆ ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು ಪಾಲಿಪರ ಕಾಂಬೆನೆಲ್ಲಿ 2 ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ ಗಾಂಗೇಯ ನಗುತ ಶೋಣಿತವ ಹರಿಸಲು ನಿಯಮದ ತೊರಿದೆ ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿಯು ದಾಸರಿಗೆ ಒಲಿದ ಸ್ತೋತ್ರ ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು | ನಾರಿಯಂತೆ ಸವಿದು ಕೊಡಲರಿಯೆ ಪಣ್ಣು || ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ 1 ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು | ಮಮ ಅಹಂಕಾರ ದುಷ್ಟದಿ ರತಿ ಸಾಕು || ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ | ಕಾಯ ಕ್ರಿಯೆಗಳು ದೇವ ದೇವ 2 ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು | ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ || ನಿನ್ನಧೀನವು ನಾನುರಕ್ಷಕನು ನೀ ಶ್ರೀಶ || ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು