ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ. ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1 ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2 ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3 ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4 ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪಡಿ | ಪರಗತಿಯನ್ನ ಮನವೇ ಪ ಹರಿವ ನದಿಯೊಳಗ ಕುಳಿತಿರುವ ಜ | ನರನು ಧಡಿಯ ಪೊರೆಗೊಯ್ದು ತೆರದಂತೆ | ಭವ ಸಮುದ್ರದಿಂ | ತ್ವರಿತದಿಂ ದಾಟಿಸುವ ತಾನು 1 ಕಟ್ಟಿ ಮನಿಯ ಪುಳವ ತಂದಿಟ್ಟು ತನ್ನಂದದಿ | ಘಟ್ಯಾಗಿ ಮಾಡುತಿಹಾ | ಸ್ಪಷ್ಟ ಭೃಂಗಿಯ ವೊಲು ಮುಟ್ಟಿ ಬಂದರೆ ತನ್ನ | ಮಟ್ಟ ತನ್ನಂತ ಮಾಳ್ಪಾ ಭೂಪಾ 2 ಈ ಪರಿಯಲಾಗಿಹ ಮಹಿಪತಿ ಗುರು ಮಹಿಮೆಯ | ನಾ ಪೊಗಳಲೆನ್ನ ಅಳವೇ | ತಾ | ಪಸುಳೆ | ಕೃಷ್ಣನಾ ಟೋಪಮಂ | ಗೆಲಿಪನಾ | ಶ್ರೀ ಪದವ ಹೊಂದಿ ಸುಖಿಸೋ ತರಿಸೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ. ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ 1 ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ಮøತಿ ಸುಖ ಕೊಟ್ಟು | ಭವವನುತ್ತರಿಸೋ 2 ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಯಾಕೆಲೋ ಮಾನವಾ ಯಚ್ಚರ ಮರೆದು ಭ್ರಮಿಸುವರೇ | ಲೋಕ ರಕ್ಷಕನಾ ಸ್ಮರಣೆ ಬಿಟ್ಟು ವಿಷಯ ಕೆಳಸುವರೇ ಪ ತುಂಬಿ ಮುಂದೆ ಇದಿರಿಟ್ಟು | ಮುಂದೆ ಇದಿರಿಟ್ಟು | ಕಂಗಳವನು ಮುಚ್ಚಿ ಪೋಗುವಂತೆ ಅದನು ಬಿಟ್ಟು 1 ಸುದತಿ ಮುಗುತಿ ಸುದತಿತಾನು | ಅನ್ಯರ ಬ್ರಾಂತಿಲಿ ಕೇಳುವಂತೆ ನೀನು 2 ಬೊಂಬೆಯಾಟದಲ್ಲಿ ಮಕ್ಕಳು ಆಪ್ತರಾಗುವಂತೆ | ಆಪ್ತರಾಗುವಂತೆ | ನಂಬಬ್ಯಾಡೋ ಇದನು ಸಂಸಾರವೇನು ನಿತ್ಯೆ 3 ಚಿತ್ರ ಬರೆದಿರಲು ಕನಕರಾಶಿ ಸರ್ವವನು | ರಾಶಿ ಸರ್ವವನು | ಆರ್ತುನೋಡಲು ಬಲ್ಲರಿಗದರ ಸುಖ ದುಃಖವೇನು 4 ಗುರು ನರನೆಂದು ಬಗೆಯ ಬ್ಯಾಡಾ ಮರವ್ಹಿಂದಾ | ಬ್ಯಾಡಾ ಮರವ್ಹಿಂದಾ | ಪರವಸ್ತು ಬಂದಿದೆ ನೋಡು ಮನುಜ ವೇಷದಿಂದ 5 ನಮ್ಮ ನಿಮ್ಮ ತೆರದಿಂದಾ ಚರಿಸುತಿಹರು ಖರೆಯಾ | ಚರಿಸುತಿಹರು ಖರೆಯಾ | ರಮ್ಯ ಅಂಗನೆ ರೂಪ ಕೊಂಡಾಡುವ ಪರೋಪರಿಯಾ 6 ಭಾವದಿ ನಂದನಸ್ವಾಮಿ ಮಹಿಪತಿಯ ಬಲಗೊಂಡು | ಮಹಿಪತಿಯ ಬಲಗೊಂಡು | ಭಾವದಿ ತರಿಸೋ ಭಾಗ್ಯ ಆತ್ಮ ಸವಿಸುಖನುಂಡು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಪ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1 ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ಫಣಿಭೂಷಣ ಶಂಭೋ 2 ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
--------------
ವಿಜಯದಾಸ